ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Thursday 17 October 2013

ಶ್ರೀ ವಾಜಪೇಯಿಯವರ ಒಂದು ಕವನ

http://www.mediafire.com/download/09o6h9817h468yf/vajapeyi_0.mp3

ಶ್ರೀ ವಾಜಪೇಯಿಯವರ ಒಂದು ಕವನ ಇಲ್ಲಿದೆ. ಅವರ ಆರೋಗ್ಯ ಸುಧಾರಿಸಿಲ್ಲ. ಅವರ ಅಂದಿನ ಮತ್ತು ಇಂದಿನ ಚಿತ್ರ ನೋಡಿದಾಗ ಸಂಕಟವಾಗುತ್ತೆ. ವಾಜಪೇಯಿಯವರ ಪ್ರತಿಯೊಂದು ಮಾತು ಅವರ  ಹೃದಯದಿಂದ ಬಂದಿದ್ದು, ಹಾಗಾಗಿ  ನಮ್ಮನ್ನು ಕಟ್ಟಿ ಹಾಕುತ್ತವೆ. ಅವರ ಕವನವನ್ನು ಅವರ ಕಂಠಸಿರಿಯಲ್ಲೇ ಕೇಳಿ. ಹಿಂದಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರ ಕನ್ನಡ ಅರ್ಥವನ್ನು ಯಾರಾದರೂ ಮಹನೀಯರು ನನಗೆ ಮೇಲ್ ಮಾಡುವಿರಾದರೆ  ವಿನಮ್ರವಾಗಿ ಸ್ವೀಕರಿಸಿ ಹಲವರಿಗೆ ತಲುಪಿಸುವೆನು.ಯಾರಾದರೂ ಸಹಾಯ ಮಾಡ್ತೀರಾ? ನನ್ನ ಮೇಲ್ ವಿಳಾಸ vedasudhe@gmail.com

ವಾಜಪೇಯೀ ಕಂಠದಿಂದ ಕೇಳಿ....

Sunday 29 September 2013

ಶಿವಮೊಗ್ಗದಲ್ಲಿ ಪ್ರಬುದ್ಧರ ವಿಚಾರಗೋಷ್ಠಿ

ಶಿವಮೊಗ್ಗ Sept 29: ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆ ಅಂಗವಾಗಿ ಸೆ.೨೯ರ ಭಾನುವಾರ ಬಿ.ಹೆಚ್. ರಸ್ತೆಯ ಅಶೋಕ ಸಾಮ್ರಾಟ್‌ನಲ್ಲಿ ಪ್ರಬುದ್ಧರ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು.
Intellectual Meet held at Shimoga Sept 29, 2013
Intellectual Meet held at Shimoga Sept 29, 2013
ಕುವೆಂಪು ವಿವಿಯ ದೂರಶಿಕ್ಷಣ ನಿರ್ದೇಶಕ ಡಾ. ವೆಂಕmಶ್ವರಲು ಉದ್ಘಾಟಿಸಿದರು. ಶಿವಮೊಗ್ಗದ ಖ್ಯಾತ ಉದ್ಯಮಿ ಹಾಗೂ ಸ್ವಾಮಿ ವಿವೇಕಾನಂದ ೧೫೦ನೇ ಜನ್ಮ ವರ್ಷಾಚರಣೆ ಸಮಿತಿಯ ಪ್ರಾಂತೀಯ ಸದಸ್ಯ ಹೆಚ್.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ರಾ.ಸ್ವ. ಸಂಘದ ಹಿರಿಯ ಪ್ರಚಾರಕರಾದ  ನ. ಕೃಷ್ಣಪ್ಪ ವೇದಿಕೆಯಲ್ಲಿದ್ದರು.
ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಧಾರವಾಡ ಆಕಾಶವಾಣಿಯ ಕಾರ್ಯಕ್ರಮಾಧಿಕಾರಿ ದಿವಾಕರ ಹೆಗಡೆ, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯ ಹಾಗೂ ಉಪನ್ಯಾಸಕ ಡಾ. ಜಯಕೃಷ್ಣ ನಾಯಕ್ ಅವರುಗಳು ವಿಚಾರ ಮಂಡನೆ ಮಾಡಿದರು. ನ. ಕೃಷ್ಣಪ್ಪನವರು ಸಮಾರೋಪ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಈ ವಿಚಾರಗೋಷ್ಠಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು.

Thursday 26 September 2013

ವಿವೇಕಾನಂದ-ಯುವಸಮಾವೇಶ

ಕೆಳಗಿನ ಕೊಂಡಿಯಲ್ಲಿ ಭಾಷಣವನ್ನು ಕೇಳಲೂ ಬಹುದು. ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು. http://www.mediafire.com/download/llrjuje2xtekc8k/Vivekaananda_speech_at_CRP(2).mp3




Monday 16 September 2013


ಹಾಸನದಲ್ಲಿ ವೇದಭಾರತೀ ಆರಂಭವಾಗಿ ಒಂದು ವರ್ಷದಲ್ಲಿ ಹಲವಾರು ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದೆ.ಹಾಸನದಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮದಲ್ಲೆಲ್ಲಾ ವೇದಾಧ್ಯಾಯಿಗಳು ಮುಂದಿರುತ್ತಾರೆಂಬ ಸಂತೋಷಕ್ಕಿಂತ ಬೇರೇನು ಬೇಕು? ನಿನ್ನೆ ಮಿತ್ರರಾದ ಪ್ರಕಾಶ್ ಎಸ್,ಯಾಜಿ ದೂರವಾಣಿಕರೆಮಾಡಿ ಪೊನ್ನಪೇಟೆಯ ಶ್ರೀ ರಾಮಕೃಷ್ಣಾಶ್ರಮದ ಮೂವರು ಯತಿಗಳು ಹಾಸನಕ್ಕೆ ಬರುವ ವಿಚಾರ ತಿಳಿಸಿದರು.ಇಂದು ಸಂಜೆ 6.00 ಗಂಟೆಗೆ ಅಗ್ನಿಹೋತ್ರ ನಡೆಯುವ ಸಂದರ್ಭಕ್ಕೆ ಮೂವರೂ ಯತಿಗಳು ಈಶಾವಾಸ್ಯಂ ಗೆ ಬಂದರು.ಒಂದು ಪುಟ್ಟ ಸಭೆ ನಡೆದು ಸ್ವಾಮಿ ಯುಕ್ತೇಶ್ವರಾನಂದರು ವಿವೇಕಾನಂದರ ಬಗ್ಗೆ ಸೊಗಸಾಗಿ ಮಾತನಾಡಿದರು.ಎಲ್ಲಾ ವೇದಾಧ್ಯಾಯಿಗಳೂ ಭಾವಪರವಶರಾದರು.ನವಂಬರ್ ನಲ್ಲಿ ನಡೆಯಲಿರುವ ವಿವೇಕಾನಂದ ರಥಯಾತ್ರೆಯನ್ನು ಯಶಸ್ವಿಯಾಗಿಸಲು ಎಲ್ಲರೂ ಸಂಕಲ್ಪ ಮಾಡುವುದರೊಂದಿಗೆ ಸಭೆಯು ಮುಕ್ತಾಯವಾಯ್ತು

Wednesday 11 September 2013

ವಿವೇಕಾನಂದರ ಚಿಕಾಗೋ ಭಾಷಣಕ್ಕೆ 120 ವರ್ಷ.

ಪ್ರಾಂತ ಸಮಿತಿಯ ಸದಸ್ಯರಾದ ಶ್ರೀ ಕೆ.ಪಿ.ಎಸ್.ಪ್ರಮೋದ್ ಮತ್ತು ಪ್ರಭುದ್ಧ ವಿಭಾಗದ ಜಿಲ್ಲಾ ಪ್ರಮುಖರಾದ ಶ್ರೀ ಕವಿನಾಗರಾಜ್  ವೇದಿಕೆಯಲ್ಲಿದ್ದಾರೆ. ಜಿಲ್ಲಾ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್  ಯುವಕನ್ನುದ್ಧೇಶಿಸಿ ಮಾತನಾಡಿದರು




ಎಡಕ್ಕೆ ಪ್ರಾಂತ ಸಮಿತಿಯ ಸದಸ್ಯರಾದ ಡಾ||ಜನಾರ್ಧನ್ ಮತ್ತು
ಬಲಕ್ಕೆ ಶ್ರೀ ಕೆ.ಪಿ.ಎಸ್. ಪ್ರಮೋದ್  ಅವರು ಜಾಗೃತ ಭಾರತ ಓಟಕ್ಕೆ ಚಾಲನೆ ನೀಡಿದರು.


ಭಾರತ ಜಾಗೃತ ಓಟದ ಮುಂಚೂಣಿಯಲ್ಲಿ  ಶ್ರೀ ಹರಿಹರಪುರಶ್ರೀಧರ್, ಡಾ||ಜನಾರ್ಧನ್, ಶ್ರೀ ಕೆ.ಪಿ.ಎಸ್. ಪ್ರಮೋದ್ ಮತ್ತು ಶ್ರೀ ಕವಿನಾಗರಾಜ್




ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು.

ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ ಜರುಗಿತ್ತು.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ರೈಲು ತಮ್ಮೂರನ್ನು ಹಾದುಹೋಗಲಿದೆ ಎಂದರಿತ ಒಂದು ಊರಿನ ಜನ ತಮ್ಮ ಊರಿನಲ್ಲಿ ರೈಲು ನಿಲ್ಲಿಸುವಂತೆ ಕೇಳಿಕೊಂಡರು. ಅದನ್ನು ನಿಯಮ ಬಾಹಿರವೆಂದು ಸ್ಟೇಷನ್ ಮಾಸ್ಟರ್ ನಿರಾಕರಿಸಿದಾಗ ಅವರು ಗೋಗರೆದರು. ಆಗಲೂ ಕೇಳುವ ಲಕ್ಷಣಗಳು ಕಾಣದಾದಾಗ ಊರಿನ ಜನ ರೈಲು ಹಳಿಗಳ ಮೇಲೆ ಅಂಗಾತ ಮಲಗಿಬಿಟ್ಟರು. ಶ್ರೇಷ್ಠ ಸಂತನೊಬ್ಬನ ಪಾದಸ್ಪರ್ಷ ನಮ್ಮೂರಿನ ನೆಲಕ್ಕೆ ಆಗಲಿಲ್ಲವೆಂದರೆ ನಮ್ಮೆಲ್ಲರ ಬದುಕು ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು. ರೈಲು ಬಂತು. ಆಜನರು ಹಳಿಯಿಂದ ಅಲುಗಾಡುವ ಲಕ್ಷಣ ಕಾಣದಿದ್ದಾಗ ಸ್ಟೇಷನ್ ಮಾಸ್ಟರ್ ಗಾಬರಿಗೊಂಡು ನಿಲುಗಡೆ ಸೂಚಿಸಿದ. ಆಜನ ಫ್ಲಾಟ್‌ಫಾರಮ್‌ನತ್ತ ಧಾವಿಸಿದರು. ಸ್ವಾಮೀಜಿ ಮೆಟ್ಟಿಲ ಬಳಿ ಬಂದು, ನಿಂತಿದ್ದ ಜನರತ್ತ ಕೈಬೀಸಿದರು. ರೈಲು ಮತ್ತೆ ಹೊರಟಿತು.
ಅಬ್ಬ! ಇದು ವ್ಯಕ್ತಿಯೊಬ್ಬನಿಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ. ಆತನ ಚಿಂತನೆಗಳನ್ನು ಅನುಸರಿಸುತ್ತ ಜೀವ ತೆರುವುದು ಒಂದೆಡೆಯಾದರೆ ಆತನಿಗಾಗಿ ಬಯಸಿ ಪ್ರಾಣ ಕೊಡಲು ಸಿದ್ಧವಾಗುವುದು ಮತ್ತೊಂದು. ಸ್ವಾಮೀಜಿ ಎರಡೂ ರೀತಿಯ ಅನುಯಯಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು.
ಅವರು ಹುಟ್ಟಿದ್ದ ಕಾಲಘಟ್ಟವೇ ಅಂಥದ್ದು. ಒಂದೆಡೆ ಮುಸ್ಲಿಮರ ಆಕ್ರಮಣದ ತೀವ್ರ ಪರಿಣಾಮವಾಗಿ, ದೀರ್ಘಕಾಲ ಸ್ವಂತಿಕೆ ಮರೆತುಬಿಟ್ಟಿದ್ದ ಭಾರತ; ಮತ್ತೊಂದೆಡೆ ಇದರ ಹಿಂದುಹಿಂದೆಯೇ ಕ್ರಿಶ್ಚಿಯನ್ನರ ಆಕ್ರಮಣಕ್ಕೆ ಒಳಗಾಗಿ ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದ ಇಲ್ಲಿನ ಸಮಾಜ. ಈ ದೃಷ್ಟಿಯಿಂದ ನೋಡಿದರೆ ಬಂಗಾಳ ಇಡಿಯ ಭಾರತದ ಸಣ್ಣ ರೂಪವಾಗಿತ್ತು. ಹೀಗಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಬ್ಬರೂ ಬಂಗಾಳವನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಕಾರ್ಯ ವಿಸ್ತರಿಸಿದರು. ಅದಕ್ಕೇ ಭಗವಂತನೂ ತನ್ನ ಲೀಲಾಕಾರ್ಯಕ್ಕೆ ಬಂಗಾಳವನ್ನೇ ವೇದಿಕೆ ಮಾಡಿಕೊಳ್ಳಬೇಕಾಯ್ತು.
ಬುದ್ಧಿವಂತ ಬಂಗಾಳಿಗಳು ಮುಸಲ್ಮಾನ ಪರಂಪರೆಯಿಂದ ವಿಮುಖರಾಗಲು ಅರಸುತ್ತಿದ್ದ ದಾರಿಯಲ್ಲಿ ಏಸುಕ್ರಿಸ್ತ ಬಂದು ನಿಂತ. ರಾಜಾಶ್ರಯವೂ ಇದ್ದುದರಿಂದ ಬುದ್ಧಿಜೀವಿಗಳು ಬಲುಬೇಗ ಏಸುಕ್ರಿಸ್ತನನ್ನು ತಬ್ಬಿಕೊಂಡವು. ಕ್ರಿಸ್ತ ಮತ್ತವನ ಅನುಯಾಯಿಗಳ ಗುಣಗಾನವನ್ನು ನಮ್ಮವರೇ ಜೋರುಜೋರಾಗಿ ಮಾಡತೊಡಗಿದರು. ಹಿಂದೂ ಸಮಾಜ ಅಲ್ಲಾಹನ ಕಬಂದ ಬಾಹುಗಳಿಂದ ಬಿಡಿಸಿಕೊಳ್ಳಲು ಹೋಗಿ ಕ್ರಿಸ್ತನ      ಉಸಿರುಗಟ್ಟಿಸುವಂತಹ ಅಪ್ಪುಗೆಯಲ್ಲಿ ಸಿಕ್ಕಿಹಾಕಿಕೊಂಡಿತು. ಆಗ ಹಿಂದೂ ಸಮಾಜ ಕಂಡುಕೊಂಡ ಪರಿಹಾರವೇ ಶ್ರೀರಾಮಕೃಷ್ಣ.
ಬಡತನದಲ್ಲಿ ಹುಟ್ಟಿ ಬದುಕಿನುದ್ದಕ್ಕೂ ಸಿರಿವಂತರನ್ನು ಕಾಲಬುಡಕ್ಕೆ ಕೆಡವಿಕೊಂಡವರವರು; ತಾವು ಶಾಲೆಗೆ ಹೋಗಲಿಲ್ಲವಾದರೂ ಇಂಗ್ಲೀಷಲ್ಲಿ ಪುಟಗಟ್ಟಲೆ ಉದ್ಧರಿಸಬಲ್ಲವರನ್ನು ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ಪಾಠ ಹೇಳಿದವರು; ಹುಟ್ಟಿನಿಂದ ಬ್ರಾಹ್ಮಣರಾದರೂ ಅಂತ್ಯಜರ ಸೇವೆಗೆ ಕಟಿಬದ್ಧರಾದವರು; ಸಾಧನೆಯ ವಿಷಯದಲ್ಲಂತೂ ಎಲ್ಲ ಪಂಥಗಳನ್ನು ಒಂದು ಮಾಡಿ ಸಾಕ್ಷಾತ್ಕರಿಸಿಕೊಂಡವರು. ಇಂತಹ ಮೂಲ ವಿಗ್ರಹಕ್ಕೆ ಉತ್ಸವ ಮೂರ್ತಿಯಾಗಿ ಜವಾಬ್ದಾರಿ ನಿರ್ವಹಿಸಿದವರು ಸ್ವಾಮಿ ವಿವೇಕಾನಂದ.
ನರೇಂದ್ರನಾಗಿದ್ದ ತರುಣ ವಿವೇಕಾನಂದನಾಗಿ ರೂಪುಗೊಂಡಿದ್ದು ರಾಮಕೃಷ್ಣರ ಗರಡಿಯಲ್ಲಿಯೇ. ಅದುಬಿಡಿ. ಮರಣ ಶಯ್ಯೆಯಲ್ಲಿ ರಾಮಕೃಷ್ಣರು ವಿವೇಕಾನಂದರನ್ನು ಕರೆದು ನು ಜಗತ್ತಿಗೆ ಶಿಕ್ಷಣ ಕೊಡುವೆಎಂದಾಗ ಯಾವ ವಿಶ್ವಧರ್ಮ ಸಮ್ಮೇಳನದ ಉಲ್ಲೇಖವೂ ಇರಲಿಲ್ಲ. ಆಗಿನ್ನೂ ೧೮೮೬. ಮುಂದೆ ಸರ್ವಧರ್ಮ ಸಮ್ಮೇಳನ ನಡೆದಿದ್ದು ಅದಾದ ೭ ವರ್ಷಗಳ ನಂತರ, ೧೮೯೩ರಲ್ಲಿ. ಹೇಗಿದೆ ವರಸೆ?

ಚಿಕಾಗೋದಲ್ಲಿ ಸ್ವಾಮೀಜಿ

ನರೇಂದ್ರ ಗುರುಗಳ ದೇಹತ್ಯಾಗದ ನಂತರ ದೇಶ ತಿರುಗಿದ. ಸಾಧನೆಯಲ್ಲಿ ಶ್ರೇಷ್ಠ ಹಂತವನ್ನೇರಿದ. ಹೃದಯದ ಆಗಸವನ್ನು ವಿಸ್ತಾರಗೊಳಿಸಿಕೊಂಡು ಬಡವರಿಗಾಗಿ ಮರುಗಿದ. ಅಜ್ಞಾನಿಗಳಿಗಾಗಿ ಕಣ್ಣೀರಿಟ್ಟ. ಅವರಿಗಾಗಿ ಬದುಕಿನ ಪ್ರತಿಕ್ಷಣವನ್ನೂ ಅರ್ಪಿಸುವ ನಿರ್ಧಾರ ಕೈಗೊಂಡ. ಆಗಲೇ ಸರ್ವಧರ್ಮ ಸಮ್ಮೇಳನದ ತಯಾರಿ ಶುರುವಾಗಿತ್ತು. ಅದೆಲ್ಲಿಂದ ಸೂಚನೆ ದೊರಕಿತ್ತೋ? ಅದೊಂದು ದಿನ ಸ್ವಾಮೀಜಿ ಸೋದರ ಸನ್ಯಾಸಿಯೊಬ್ಬರ ಬಳಿ ಅದೆಲ್ಲ ವೈಭವದ ಕಾರ್ಯಕ್ರಮ ನಡೆಯುತ್ತಿರುವುದು ಯಾರಿಗಾಗಿ ಗೊತ್ತೇನು? ಇವನಿಗಾಗಿಎಂದು ತಮ್ಮ ಎದೆಯತ್ತಲೇ ಬೆಟ್ಟು ಮಾಡಿದರು. ಜೊತೆಯಲ್ಲಿದ್ದವರಿಗೆ ಇದೊಂದು ಹುಚ್ಚು ಎಂದುಕೊಳ್ಳದೆ ವಿಧಿಯಿರಲಿಲ್ಲ.
ಇಷ್ಟಕ್ಕೂ ಸರ್ವಧರ್ಮ ಸಮ್ಮೇಳನ ಆಯೋಜನೆಯಾಗಿದ್ದೇಕೆ ಗೊತ್ತೇನು? ಕೊಲಂಬಸ್ ಅಮೆರಿಕ ಕಂಡುಹಿಡಿದು ನಾಲ್ಕುನೂರು ವರ್ಷಗಳಾಗಿಬಿಟ್ಟಿತ್ತು. ಈ ನಾಲ್ಕು ಶತಕಗಳಲ್ಲಿ ಪಶ್ಚಿಮ ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಆಗಬೇಕಿತ್ತು. ಈ ಹಿಂದೆ ಆದ ಇದೇ ರೀತಿಯ ಎರಡು ಕಾರ್ಯಕ್ರಮಗಳಲ್ಲಿ ಲಕ್ಷ ಲಕ್ಷ ಜನ ಭಾಗವಹಿಸಿದ್ದರು. ಹೀಗಾಗಿ ಈ ಬಾರಿಯ ಪ್ರಯತ್ನ ಅದ್ದೂರಿಯೂ ವಿಶೇಷವೂ ಆಗಿರುವುದು ಅನಿವಾರ್ಯವಿತ್ತು. ಅದಕ್ಕಾಗಿ ಜಗತ್ತಿನೆಲ್ಲ ಮತಪಂಥಗಳವರನ್ನು ಒಟ್ಟಿಗೆ ಸೇರಿಸುವ ಅವರ ಮಾತುಗಳನ್ನು ಕೇಳುವ, ಕೊನೆಗೆ ಕ್ರಿಶ್ಚಿಯನ್ ಪಂಥವೇ ಎಲ್ಲರಿಗಿಂತ, ಎಲ್ಲಕ್ಕಿಂತ ಶ್ರೇಷ್ಠವೆಂದು ಸಾರುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವತಃ ಪೋಪ್ ಇದನ್ನು ಧಿಕ್ಕರಿಸಿದ್ದ. ಕ್ರಿಶ್ಚಿಯನ್ ಮತಕ್ಕೆ ಸರಿಸಮವಾಗಿ ಇತರರನ್ನು ಕೂರಿಸುವ ವಿಚಾರವೇ ಅವರಿಗೆ ಹಿಡಿಸಿರಲಿಲ್ಲ. ಅಂತೂ ಕಾರ್ಯಕ್ರಮದ ದಿನ ನಿರ್ಧಾರವಾಯಿತು. ಸೂತ್ರಧಾರ ಡಾ.ಬರೋಸ್ ಅನೇಕ ದೇಶಗಳನ್ನು ಸುತ್ತಾಡಿದ. ಎಲ್ಲ ಮತಪಂಥದವರನ್ನು ಕಾರ್ಯಕ್ರಮಕ್ಕೆ ಬರುವಂತೆ ಮನ ಒಪ್ಪಿಸುವ ಕೆಲಸ ಮಾಡಿದ. ಆದರೆ ಭಾರತದ ಸಂತರು ಒಪ್ಪಲಿಲ್ಲ. ಕೊನೆಗೆ ಗರ ದಾಟಿ ಬಂದು ನಿಮ್ಮ ಧರ್ಮದ ಶ್ರೇಷ್ಠತೆ ಜಗತ್ತಿಗೆ ತಿಳಿಸಲಿಲ್ಲವೆಂದರೆ ಜಗತ್ತಿಗೆ ಕೊಡಲು ಹಿಂದೂ ಧರ್ಮದಲ್ಲಿ ಏನೂ ಇಲ್ಲವೆಂದು ಭಾವಿಸಿಬಿಡುತ್ತಾರೆಎಂದು ಹೆದರಿಸಿದ. ಯಾರೂ ತಲೆಬಾಗಲಿಲ್ಲ. ಬ್ರಾಹ್ಮಣ ಅಡುಗೆ ಭಟ್ಟರಿರುವ ಪ್ರತ್ಯೇಕ ಹಡಗು ನಿಮಗಾಗಿ ವ್ಯವಸ್ಥೆ ಮಾಡಿಸುತ್ತೇನೆ ಎಂದು ವಾಗ್ದಾನ ಮಾಡಿದ. ಆಗಲೂ ಯಾರೂ ಒಪ್ಪಿಕೊಳ್ಳಲಿಲ್ಲ. ಹಿಂದೂ ಧರ್ಮ ಮಾತ್ರ ಕ್ರಿಶ್ಚಿಯನ್ನರ ಎದುರು ನಿಲ್ಲಬಲ್ಲದೆಂಬ ಅರಿವು ಅವರಿಗಿತ್ತು. ಹೀಗಾಗಿ ಹೇಗಾದರೂ ಮಾಡಿ ಹಿಂದೂ ಸಂತರನ್ನೊಯ್ದು ಕ್ರಿಶ್ಚಿಯನ್ ಶ್ರೇಷ್ಠತೆ ಸಾಬೀತು ಮಾಡಲು ಸಾಧ್ಯವಾದರೆ ಸಾಕು ಎಂಬುದು ಅವರ ಗುರಿ.

ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ ಸ್ವಾ,ಮೀಜಿ

ಅವರ ದುರ್ದೈವ. ಹಿಂದೂ ಧರ್ಮದ ಪ್ರತಿನಿಧಿಯಾಗಿ ಜಗದ ವೇದಿಕೆ ಮೇಲೆ ಸ್ವಾಮಿ ವಿವೇಕಾನಂದರು ನಿಂತುಬಿಟ್ಟರು. ಅವರು ಅಲ್ಲಿಗೆ ಹೋಗಿದ್ದು, ವಿಳಾಸ ಕಳಕೊಂಡು ಪರದಾಡಿದ್ದು, ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುವ ಚಿಂತನೆ ಮಾಡಿದ್ದು, ಹಾಗೆಯೇ ವೆದಿಕೆ ಮೇಲೆ ವಿಶೇಷ ಅತಿಥಿಯಾಗಿ ಕುಳಿತಿದ್ದು. ಎಲ್ಲವೂ ರೋಚಕ ಕಥೆಯೇ.
೧೮೯೩ರ ಸೆಪ್ಟೆಂಬರ್ ೧೧ಕ್ಕೆ ದೊಡ್ಡದೊಂದು ಗಂಟೆಯ ಸದ್ದಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೊದಲು ಮಾತನಾಡಿದ ಆರ್ಚ್ ಬಿಷಪ್ ಜಾಂಟೆಗೆ ಭಾರೀ ಕರತಾಡನದ ಸ್ವಾಗತ ಸಿಕ್ಕಿತು. ಮೊದಲು ಮಾತನಾಡಿದ್ದಕ್ಕಾಗಿ ಆ ಗೌರವ. ನಡುವೆ ಮಾತನಾಡಿದ ಬ್ರಹ್ಮ ಸಮಾಜದ ಮಜುಮ್‌ದಾರರಿಗೂ ಅಷ್ಟೆ ಗೌರವ ಸಿಕ್ಕಿತು. ಅದಾಗಲೇ ಮಜುಮ್‌ದಾರರ ಲೇಖನಗಳು ಪಶ್ಚಿಮದ ಕದತಟ್ಟಿ ಅವರು ಖ್ಯಾತರಾಗಿದ್ದರು. ಹೀಗಾಗಿ ಅಮೆರಿಕನ್ನರು ಅವರನ್ನು ಗುರುತಿಸಿ ಚಪ್ಪಾಳೆ ಹೊಡೆದರು. ಚೀನಾದ ಫುಂಗ್ ಕ್ಯುಂಗ್ ಯೋಗೂ ವಿಶೇಷ ಗೌರವ ಸಿಕ್ಕಿತು. ಚೀನಾದ ಕುರಿತಂತೆ ಅಮೆರಿಕಾದ ಧೋರಣೆಯನ್ನು ವಿರೋಧಿಸುತ್ತಿದ್ದವರ ಗೌರ ಅದು. ಸ್ವಾಮೀಜಿ ಸಿಂಹದಂತೆ ಕುಳಿತಿದ್ದರು. ವೇದಿಕೆ ಮೇಲೆ ಅವರಿಗೆ ಸಿಕ್ಕಿದ್ದೂ ವಿಶೇಷ ಜಾಗವೇ. ಆದರೆ ಅವರು ಭಾಷಣಕ್ಕೆ ಹಿಂದೇಟು ಹಾಕುತ್ತಿದ್ದರು. ಕೊನೆಗೂ ಭಾಷಣದ ಅಂತಿಮ ಅವಧಿಯಲ್ಲಿ ಅವರು ಮಾತಾಡಲೇಬೇಕಾಯ್ತು. ಅವರು ಎದ್ದು ನಿಂತೊಡನೆ ಸಭೆಯಲ್ಲಿ ನೀರವತೆ ಆವರಿಸಿತು. ಮಾತು ಹರಿಯುವ ನೀರಿನಂತೆ ಶುರುವಾಯಿತು. ಮೊದಲ ಐದು ಪದಗಳಿಗೆ ಅಚ್ಚರಿಯೆನಿಸುವಷ್ಟು ಕರತಾಡನ. ಕಾರಣವೇ ಇಲ್ಲದೆ ಸಿಕ್ಕ ಅಪರೂಪದ ಗೌರವ ಅದು. ವೇದಿಕೆ ಮೇಲಿದ್ದವರಿಗೆ ಗಾಬರಿ. ಅದಾದ ಮರುಕ್ಷಣದಲ್ಲಿ ಸ್ವಾಮೀಜಿಯವರ ಮಾತು ಪ್ರವಾಹವಾಯಿತು. ಭಾರತ – ಹಿಂದೂ ಧರ್ಮಗಳು ಒಂದಕ್ಕೊಂದು ಪೂರಕವಾಗಿ ಶಾಂತಿಯ, ವಿಶ್ವಭ್ರಾತೃತ್ವದ ಮಾತುಗಳು ಅಂತರಾಳದಿಂದ ಹೊಮ್ಮಿಬಂದವು. ಅದು ಬರೆದುಕೊಂಡು ಬಂದು ಓದಿದ ರೆಡಿಮೇಡ್ ಸಾಹಿತ್ಯವಾಗಿರಲಿಲ್ಲ. ಹೃದಯ ತಂತಿ ಮೀಟಿದಾಗ ಹೊಮ್ಮಿದ ಸಂಗೀತವಾಗಿತ್ತು. ಆಜನ ತಲೆದೂಗಿದರು. ಬಾಯಿ ಕಳಕೊಂಡರು. ಭಾವುಕರು ಕಣ್ಣೀರಾದರು. ಒಟ್ಟಿನಲ್ಲಿ, ಮೊದಲ ಜಯ ಸ್ವಾಮೀಜಿಗೆ ದಕ್ಕಿಬಿಟ್ಟಿತ್ತು. ನಿಸ್ಸಂಶಯವಾಗಿ ಈ ಸಮ್ಮೇಳನದ ನಿಜವಾದ ಹೀರೋ ಸ್ವಾಮಿ ವಿವೇಕಾನಂದರೇ!ಪತ್ರಿಕೆಯೊಂದು ಉದ್ಗರಿಸಿತು. ಇವನ ದೇಶಕ್ಕೆ ಮಿಷನರಿಗಳನ್ನು ಕಳಿಸಿಕೊಡುವುದಿರಲಿ, ನಾವೇ ಇವನ ದೇಶದಿಂದ ಇಂತಹವರನ್ನು ಕರೆಸಿಕೊಂಡು ಪಾಠ ಕಲಿಯಬೇಕುಮತ್ತೊಂದು ಪತ್ರಿಕೆ ನೊಂದು ಹೇಳಿತು. ಹಿಂದಿನ ದಿನದವರೆಗೆ ಯಾರಿಗೂ ಗೊತ್ತಿರದಿದ್ದ ಸ್ವಾಮಿ ವಿವೇಕಾನಂದ ಈಗ ದೇಶದ ಮೂಲೆಮೂಲೆಗಳಲ್ಲಿ ಪರಿಚಿತನಾಗಿದ್ದ. ಇಂದಿಗೂ ಅಮೆರಿಕನ್ನರಿಗೆ ಈ ಕುರಿತ ಅಹಂಕಾರ ಇದೆ.   ನೀವು   ಸ್ವಾಮಿ ವಿವೇಕಾನಂದರನ್ನು ನಮಗೆ ಕೊಟ್ಟಿರಿ. ನಾವು ವಿಶ್ವಪ್ರಸಿದ್ಧ ವಿವೇಕಾನಂದರನ್ನು ನಿಮಗೆ ಮರಳಿಸಿದೆವುಎಂದವರು ಹೆಮ್ಮೆಯಿಂದ ಹೇಳುತ್ತಾರೆ.

ಸಮ್ಮೇಳನದ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸ್ವಾಮೀಜಿಯ ಮಾತುಗಳೆ ಪ್ರಮುಖವಾದವು. ಕಾರ್ಯಕ್ರಮದ ಕೊನೆಯಲ್ಲಿ ಸ್ವಾಮೀಜಿ ಆಡುವ ಹತ್ತು ನಿಮಿಷದ ಮಾತುಗಳಿಗಾಗಿ ಜನ ಎರೆಡೆರಡು ಗಂಟೆ ಬೇರೆಯವರ ಕೊರೆತ ಕೇಳುತ್ತ ಕುಳಿತಿರುತ್ತಿದ್ದರು. ಹಿಂದೂ ಧರ್ಮದ ಕುರಿತಂತೆ ವಿಸ್ತೃತ ಭಾಷಣವಿರಲಿ, ಬೌದ್ಧ ಸನ್ಯಾಸಿ ಧರ್ಮಪಾಲರ ಕೋರಿಕೆಯ ಮೇರೆಗೆ ಬುದ್ಧನ ಬಗ್ಗೆಯೂ ಸುಂದರ ಉಪನ್ಯಾಸ ನೀಡಿದರು. ಸ್ವಾಮೀಜಿಯವರ ಕಾರಣದಿಂದಾಗಿ ಸಮ್ಮೇಳನದ ಆವರಣ ಕಿಕ್ಕಿರಿದು ತುಂಬುತ್ತಿತ್ತು. ಹೀಗಾಗಿ ಸಮ್ಮೇಳನದ ಸ್ಥಳವನ್ನೆ ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಬಂತು. ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಸ್ವಾಮೀಝಿಯವರ ಕಟೌಟ್‌ಗಳನ್ನು ನಿಲ್ಲಿಸಿದ್ದಲ್ಲದೆ, ಅವರ ಮುಂದಿನ ಕಾರ್ಯಕ್ರಮಗಳ ವಿವರವನ್ನೂ ಲಗತ್ತಿಸಲಾಗುತ್ತಿತ್ತು. ಸಮ್ಮೇಳನ ಯಶಸ್ವಿಯಾಯಿತು. ಆದರೆ ಕ್ರಿಶ್ಚಿಯನ್ನರಿಗೆ ತುಂಬಲಾಗದ ನಷ್ಟವಾಯ್ತು. ಮಿಷಿನರಿಗಳೆಡೆಗೆ ಹರಿದು ಬರುತ್ತಿದ್ದ ದಾನದ ಆದಾಯ ಸಾಕಷ್ಟು ಕಡಿಮೆಯಾಯ್ತು.
ಸ್ವಾಮೀಜಿ ಅಮೆರಿಕಾ ಯುರೋಪುಗಳನ್ನು ತಿರುಗಾಡಿದರು. ಭಾರತ, ಹಿಂದೂ ಧರ್ಮಗಳ ಕುರಿತಂತೆ ಇದ್ದ ತಪ್ಪು ಅಭಿಪ್ರಾಯಗಳನ್ನು ಬಡಿದೋಡಿಸಿದರು. ತಮ್ಮ ಕೆಲಸಕ್ಕೆ ಬೇಕಾದ ಪಶ್ಚಿಮದ ಶಿಷ್ಯರನ್ನು ತಯಾರು ಮಾಡಿದರು. ಎಲ್ಲವೂ ಸರಿ. ಆಗೆಲ್ಲ ಸ್ವಾಮೀಜಿಯ ಮಾನಸಿಕತೆ ಹೇಗಿತ್ತು? ಸಿಗುತ್ತಿದ್ದ ಗೌರವಕ್ಕೆ ಮೈಮರೆತು ಭಾರತದಿಂದ ಒಂದು ಕ್ಷಣವಾದರೂ ದೂರವಿದ್ದರಾ? ಅವರದೊಂದು ಪತ್ರ ಓದಿದರೆ ಗೊತ್ತಾಗುತ್ತದೆ. ಹೆಸರು ಕೀರ್ತಿಗಳ ಆಸೆಗೆ ನಾನಿಲ್ಲಿಗೆ ಬಂದಿಲ್ಲ. ಈಗಲೂ ಲಂಗೋಟಿ ಉಡುವ, ಭಿಕ್ಷೆ ಬೇಡಿ ಉಣ್ಣುವ, ಮರದ ಕೆಳಗೆ ಮಲಗುವ ಆಸೆಯಾಗುತ್ತದೆಎಂದವರು ಬರೆದಿದ್ದರು. ಅದೇ ವೇಳೆಗೆ,ನನ್ನ ಕಾಲಿಗೆ ನಮಿಸುವ ಅಂಗ್ಲರು ನನ್ನ ದೇಶದ, ನನ್ನ ಜನಾಂಗದವರನ್ನು ಬೂಟು ಕಾಲುಗಳಲ್ಲಿ ಒದೆಯುತ್ತಾರಲ್ಲಎಂಬ ಆಕ್ರೋಶವೂ ಅವರಿಗಿತ್ತು. ಹೀಗಾಗಿ ಸ್ವಾಮೀಜಿ ತಮ್ಮ ಯಶಸ್ಸಿನ ಅಷ್ಟೂ ಪಾಲನ್ನು ಭಾರತದ ಸೇವೆಗೆ ಸುರಿದರು. ಮಲಗಿದ್ದ ಆತ್ಮಗಳನ್ನು ಬಡಿದೆಬ್ಬಿಸಿದರು. ಅದಕ್ಕಾಗಿ ಕಟಿಬದ್ಧರಾದರು.

ಚಿಕಾಗೋದಲ್ಲಿ ಸ್ವಾಮೀಜಿ

ಸ್ವಾಮೀಜಿಯ ಮಾತು, ಬರೆಹ, ಕೊನೆಗೆ ಅವರದೊಂದು ನೆನಪು ಕೂಡ ಇಂದಿಗೂ ಕೆಲಸ ಮಾಡುತ್ತಿದೆ. ತರುಣ ಪೀಳಿಗೆಗೆ, ತ್ಯಾಗಿಗಳಿಗೆ, ಸೇವಾಮಾರ್ಗಿಗಳಿಗೆ, ರಾಜನೀತಿಜ್ಞರಿಗೆ, ವ್ಯಾಪಾರಿಗಳಿಗೆ, ಅಧಿಕಾರಿಗಳಿಗೆ, ಕೊನೆಗೆ ಸನ್ಮಾರ್ಗದಲ್ಲಿ ನಡೆಯಲು ಬಯಸುವ ಪ್ರತಿಯೊಬ್ಬರಿಗೆ ಸ್ವಾಮೀಜಿ ಇಂದಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಅನುಭವಿಸಿದವರಿಗೆ ಅದು ದರ್ಶನವಾಗುತ್ತದೆ. ಉಳಿದವರಿಗೆ ಅದು ಆದರ್ಶವಾದರೂ ಆಗುತ್ತದೆ. ಅಲೀಪುರ ಮೊಕದ್ದಮೆಯಲ್ಲಿ ಸಿಲುಕಿ ಜೈಲಿನ ಏಕಾಂತದಲ್ಲಿದ್ದ ಅರವಿಂದರಿಗೆ ವಿವೇಕಾನಂದರೊಡನೆ ಮಾತನಾಡಿದ ಅನುಭವವಾಗುತ್ತಿತ್ತಂತೆ. ನಮ್ಮ ನಾಡಿನ ರಸಋಷಿ ಕುವೆಂಪು ಅವರನ್ನೇ  ವಿವೇಕಾನಂದಎನ್ನುತ್ತ ತಾದಾತ್ಮ್ಯ ಭಾವದಲ್ಲಿ ಇರುತ್ತಿದ್ದುದನ್ನು ನೋಡಿದವರಿದ್ದಾರೆ.
ಹೇಳಿ ಹಾಗಿದ್ದರೆ  ದೇಹವೇ ಇಲ್ಲದ ಮಾತುಎಂದು ಸ್ವಾಮೀಜಿ ಹೇಳಿದ್ದು ಸುಳ್ಳೆ? ಒಮ್ಮೆ ತೆರಕೊಂಡು ನೋಡಿ, ಆ ಮಹಾಪ್ರವಾಹ ನಮ್ಮಂತರಗವನ್ನು ಸೋಕಿದರೆ ನಮ್ಮ ಬದುಕೇ ಬದಲಾಗಿಬಿಡುತ್ತದೆ. ಕುವೆಂಪು ಹೇಳಿದಂತೆ ಹೊಕ್ಕರೆ ಪ್ರಬುದ್ಧರಾಗುವ, ಮಿಂದರೆ ಪುನೀತರಾಗುವ ಅಮೃತದ ಪ್ರವಾಹ ಅದು!

-ಚಕ್ರವರ್ತಿ ಸೂಲಿಬೆಲೆ

ನಿಜ ದ್ವಿಜತ್ವ!!

 ದ್ವಿಜ ಅಂದರೆ ಎರಡನೆಯ ಹುಟ್ಟು ಪಡೆದವನೆಂದು.ತಾಯಿಯ ಗರ್ಭದಿಂದ ಜನಿಸುವಾಗ ಮೊದಲಹುಟ್ಟಾದರೆ  ಉಪನಯನ ಸಂಸ್ಕಾರ ವಾದಾಗ ಎರಡನೆಯ ಹುಟ್ಟು ಪಡೆದು ದ್ವಿಜ ಎನಿಸುತ್ತಾನೆ. ಆದರೆ ದ್ವಿಜ ಎಂದರೆ ಬ್ರಾಹ್ಮಣ ಎಂದು ಸಾಮಾನ್ಯವಾಗಿ ಜನರು ಭಾವಿಸುತ್ತಾರೆ. ವಿವೇಕಾನಂದರು ಹುಟ್ಟಿನಿಂದ ಬ್ರಾಹ್ಮಣರೇ? ಅಲ್ಲ. ಅವರು ನಿಜವಾದ ದ್ವಿಜತ್ವ ಪಡೆದವರು. ತಾಯಿಯ ಗರ್ಭದಿಂದ ಜನಿಸಿ ನರೇಂದ್ರ ಹೆಸರು ಪಡೆದ ಮಗು ತನ್ನ ಯೌವ್ವನದಲ್ಲಿ ಸನ್ಯಾಸಿಯಾಗಿ ಸಂಚರಿಸುತ್ತಿರುವಾಗ ಶಿವಾನಂದ ಎಂದು ಜನರು ಕರೆದರು.ಅದೇ ಶಿವಾನಂದರು 1892 ಡಿಸೆಂಬರ್ 25 ರಂದು ಜಗನ್ಮಾತೆ ಕನ್ಯಾಕುಮಾರಿಯ ಮಡಿಲಲ್ಲಿ ನಮಸ್ಕರಿಸಿ ಕಡಲಿನ ಮಧ್ಯೆ ಬಂಡೆಯಲ್ಲಿ ಮೂರು ದಿನ ಕುಳಿತು ತಪಸ್ಸುಮಾಡುವಾಗ ತಾಯಿ ಭಾರತಿಯ ಗರ್ಭದಲ್ಲಿ ವಿವೇಕಾನಂದರ ಬೀಜಾಂಕುರವಾಯಿತು. ಅಲ್ಲಿಂದ ಸರಿಯಾಗಿ ಒಂಬತ್ತು ತಿಂಗಳು ತಾಯಿ ಭಾರತಿಯ ಗರ್ಭದಲ್ಲಿ ಸಂಸ್ಕಾರ ಪಡೆದು 1893 ಸಪ್ಟೆಂಬರ್ 11 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾಷಣ ಮಾಡಿದಾಗ ಅವರು ತಾಯಿ ಭಾರತಿಯ ಹೆಮ್ಮೆಯ ಪುತ್ರ ವಿವೇಕಾನಂದರಾಗಿ ಎರಡನೆಯ ಜನ್ಮ ಪಡೆದರು. ಇದಲ್ಲವೇ ನಿಜವಾದ ದ್ವಿಜತ್ವ?!! ವಿವೇಕಾನಂದರು ಅಮೆರಿಕೆಯ ಚಿಕಾಗೋ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ  ಇಂದಿಗೆ ಸರಿಯಾಗಿ 120 ವರ್ಷ ತುಂಬುತ್ತದೆ. ವಿವೇಕಾನಂದರ ಚಿಂತನೆಯಲ್ಲಿ ಮನಸ್ಸು ತೊಡಗಿದ್ದಾಗ ನನ್ನ ಮನದಲ್ಲಿ ಮೂಡಿದ ಚಿತ್ರಣ ಇದು.

Monday 12 August 2013

ವೇದೋಕ್ತ ಜೀವನ ಶಿಬಿರ



ವೇದಭಾರತೀ, ಹಾಸನ

ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ

ವೇದೋಕ್ತ ಜೀವನ ಶಿಬಿರ

ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ

ದಿನಾಂಕ 23,24 ಮತ್ತು 25 ಆಗಸ್ಟ್ 2013

ಸಮಯ ಸಾರಿಣಿ

ಪ್ರಾತ:ಕಾಲ 
5:00 :ಉತ್ಥಾನ
5:00 ರಿಂದ 6:15 :ಶೌಚ-ಸ್ನಾನ-ಪಾನೀಯ
6:15 ರಿಂದ 7:00 :ಯೋಗ-ಪ್ರಾಣಾಯಾಮ
7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ
8:00 ರಿಂದ 8.30 :ಉಪಹಾರ
8:45 ರಿಂದ 11:00 :ವೇದೋಕ್ತ ಜೀವನ ಕ್ರಮ,ಅವಧಿ-1 
11:00 ರಿಂದ 12:00 :ವೇದಾಭ್ಯಾಸ

ಮಧ್ಯಾಹ್ನ: 
12:15 ರಿಂದ 2:30 :ಭೋಜನ ವಿಶ್ರಾಂತಿ
2:45 ರಿಂದ 4:00 :ವೇದೋಕ್ತ ಜೀವನ ಕ್ರಮ,ಅವಧಿ-2 
4:00 ರಿಂದ 4:30 :ಪಾನೀಯ
4:30 ರಿಂದ 6:00 :ವೇದೋಕ್ತ ಜೀವನ ಕ್ರಮ ,ಅವಧಿ-3
6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ

ರಾತ್ರಿ:
7:00 ರಿಂದ 8:00 :ಉಪನ್ಯಾಸ 
8:15 ರಿಂದ 9:00 :ಭೋಜನ 
9:00 ರಿಂದ 10:00 :ಅನೌಪಚಾರಿಕ
10:00-ದೀಪ ವಿಸರ್ಜನೆ

ವೇದೋಕ್ತ ಜೀವನ ಶಿಬಿರ- ಸೂಚನೆಗಳು:
1.ಶಿಬಿರಾರ್ಥಿಗಳು ದಿನಾಂಕ 22.8.2013 ರಾತ್ರಿ 9.00ಕ್ಕೆ ಮುಂಚೆ ಶಿಬಿರಸ್ಥಾನದಲ್ಲಿರಬೇಕು.ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
2.ಜಮಖಾನದ ವ್ಯವಸ್ಥೆ ಇರುತ್ತದೆ.ಹೊದಿಕೆಯಣ್ಣೂ ಶಿಬಿರಾರ್ಥಿಗಳೇ ತರಬೇಕು.
3.ಹಾಸನದ ಶಿಬಿರಾರ್ಥಿಗಳು ಶಿಬಿರದಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ6.00ಕ್ಕೆ ಶಿಬಿರಸ್ಥಾನದಲ್ಲಿ ಹಾಜರಿರಬೇಕು.
4.ಟಾರ್ಚ್ ಒಂದನ್ನು ಹೊಂದಿದ್ದರೆ ಉತ್ತಮ.
5.ಬರೆಯಲು ಪುಸ್ತಕ ಪೆನ್ ಶಿಬಿರದಲ್ಲಿ ಕೊಡಲಾಗುತ್ತದೆ.
6.ವೇದೋಕ್ತ ಜೀವನ ಪಥ, ನಿತ್ಯ ಸಂಧ್ಯಾಗ್ನಿಹೋತ್ರ, ನಿಜವ ತಿಳಿಯೋಣ ಸಿಡಿ, ಮತ್ತು ಉಪಯುಕ್ತ ಇತರೆ ಪುಸ್ತಕಗಳು ಶಿಬಿರದಲ್ಲಿ ಮಾರಾಟಕ್ಕೆ ಲಭ್ಯ.
7.ಶಿಬಿರದಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ.
8.ಮಲಗಲು ಸ್ತ್ರೀ ಪುರುಷರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಇರುತ್ತದೆ .ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ
9.ಬೆಲೆಬಾಳುವ ಸಾಮಾನುಗಳನ್ನು ತರದಿರುವುದು ಉತ್ತಮ
10.ಶಿಬಿರದಲ್ಲಿನ ಎಲ್ಲಾ ಕಾರ್ಯಕ್ರಮಗಳೂ ರೆಕಾರ್ಡ್ ಆಗುತ್ತವೆ ಮತ್ತು ಅದರ ಆಡಿಯೋ/ವೀಡಿಯೋ/ ಫೋಟೋಗಳು ಇರುವ ಸಿ.ಡಿ/ಡಿ.ವಿ.ಡಿ ಯನ್ನು ಆಸಕ್ತರಿಗೆ ಶಿಬಿರ ಮುಗಿದ 15 ದಿನಗಳಲ್ಲಿ ಕಳಿಸಿಕೊಡ ಲಾಗುವುದು.ಆದ್ದರಿಂದ ಶಿಬಿರಾರ್ಥಿಗಳು ಬೆಲೆಬಾಳುವ ಕ್ಯಾಮರಾ, ಮೊಬೈಲ್ ಅಥವಾ ರೆಕಾರ್ಡಿಂಗ್ ಸಾಧನ ತರದಿರುವುದು ಉತ್ತಮ.ಒಂದು ವೇಳೆ ತಂದರೆ ಬೆಲೆಬಾಳುವ ಸಾಧಗಳ ಜವಾಬ್ದಾರಿ ಶಿಬಿರಾರ್ಥಿಗಳದ್ದೇ ಆಗಿರುತ್ತದೆ.
11.ವಿಶ್ರಾಂತಿ ಸಮಯದ ಹೊರತಾಗಿ ಶಿಬಿರದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು.
12.ವೇದಸುಧೆ ತಾಣದಲ್ಲಿ ಶಿಬಿರಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.ಒಂದುವೇಳೆ ಶಿಬಿರಶುಲ್ಕ 500.00 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಅವರ ಹೆಸರು ಪ್ರಕಟವಾಗಿರದಿದ್ದರೆ vedasudhe@gmail.com ಗೆ ಹಣಪಾವತಿ ವಿವರವನ್ನು ಮೇಲ್ ಮಾಡಿ.
13.ದಿನಾಂಕ 25.8.2013 ಭಾನುವಾರ ಸಂಜೆ 5.00 ಗಂಟೆಗೆ ನಡೆಯುವ ಶಿಬಿರ ಸಮಾರೋಪ ಸಮಾರಂಭವನ್ನು ಮುಗಿಸಿಕೊಂಡು ಶಿರಾರ್ಥಿಗಳು ಹಿಂದಿರುಗಬಹುದು. ಹೊರ ಊರುಗಳಿಗೆ ಅಂದು ತೆರಳಲು ಅವಕಾಶವಿಲ್ಲದಿದ್ದವರಿಗೆ ರಾತ್ರಿ ಉಳಿಯಲು ಅವಕಾಶವಿರುತ್ತದೆ.

14.ಹೆಚ್ಚಿನ ಮಾಹಿತಿಗಾಗಿ ಕವಿನಾಗರಾಜ್: 9448504804,ಹರಿಹರಪುರಶ್ರೀಧರ್:9663572406, ಅಥವಾ ಶ್ರೀ ಚಿನ್ನಪ್ಪ: 9448653727ಇವರನ್ನು ಸಂಪರ್ಕಿಸಿ

Wednesday 7 August 2013

ವೇದೋಕ್ತ ಜೀವನ ಶಿಬಿರ


ವೇದಭಾರತೀ, ಹಾಸನ


ವೇದೋಕ್ತ ಜೀವನ ಶಿಬಿರ
ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು


ದಿನಾಂಕ:   ಆಗಸ್ಟ್ 23,24 ಮತ್ತು 25                     ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ

ಶಿಬಿರದ ಬಗ್ಗೆ ಕೆಲವು ಮಾಹಿತಿಗಳು:
1.ಬೆಳಿಗ್ಗೆ ಮತ್ತು ಸಂಜೆ  ಸಂಧ್ಯೋಪಾಸನೆ  ಮತ್ತು ಅಗ್ನಿಹೋತ್ರ ಅಭ್ಯಾಸ
2.ವೇದಮಂತ್ರಾಭ್ಯಾಸ
3.ವೇದೋಕ್ತ ಜೀವನದ ಬಗ್ಗೆ ಶರ್ಮರ ಮಾರ್ಗದರ್ಶನ[ ದಿನದಲ್ಲಿ ನಾಲ್ಕು   ಅವಧಿಗಳು]
4.ಪ್ರತಿದಿನ  ಸಂಜೆ ಶ್ರೀಸುಧಾಕರಶರ್ಮರ ಸಾರ್ವಜನಿಕ ಉಪನ್ಯಾಸ
5.ಮುಕ್ತ ಚರ್ಚೆಗೆ ಅವಕಾಶ
6.ಸರಳವಾದ ಊಟೋಪಚಾರ
7.ತಂಗಲು ವ್ಯವಸ್ಥೆ
8.ಶಿಬಿರಶುಲ್ಕ ರೂ: 500.00

 ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಶಿಬಿರಾರ್ಥಿಗಳು
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
8. ಗುರುಪ್ರಸಾದ್, ಭದ್ರಾವತಿ
9.ಮಹೇಶ್, ಭದ್ರಾವತಿ
10. ಕೆ.ಜಿ.ಕಾರ್ನಾಡ್,ತುಮಕೂರು
11.ಮೋಹನ್ ಕುಮಾರ್, ನಂಜನಗೂಡು
12. ಕವಿ ನಾಗರಾಜ್,ಹಾಸನ
13. ಶ್ರೀನಿವಾಸ್, AIR,ಹಾಸನ
14. ಹರಿಹರಪುರಶ್ರೀಧರ್,ಹಾಸನ
15. ಪ್ರೇಮಾ ಭಗಿನಿ,ಹಾಸನ
16. ಚಿನ್ನಪ್ಪ,ಹಾಸನ
17. ಅಶೋಕ್,ಹಾಸನ
18.ಶ್ರೀಮತೀ ಶೈಲ,ಹಾಸನ
19.ಪಾಂಡುರಂಗ ,ಹಾಸನ      
20.ಸತೀಶ್,ಹಾಸನ
21.ಲೋಕೇಶ್,ಹಾಸನ
22.ಆದಿಶೇಷ್,ಹಾಸನ
23.ಕೇಶವಮೂರ್ತಿ,ಹಾಸನ
24.ಬೈರಪ್ಪಾಜಿ ,ಹಾಸನ
25.ನಿತೀಶ್ ಭಾರಧ್ವಾಜ್,ಹಾಸನ
26. ವಿನಯ್ ಕಾಶ್ಯಪ್,ಬೆಂಗಳೂರು.
27.ಶಿವಶಂಕರ್,ಬೆಂಗಳೂರು
ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
[ಇವರುಗಳು ತಮ್ಮ ಭಾಗವಹಿಸುವಿಕೆಯನ್ನು vedasudhe@gmail.com ಗೆ ಮೇಲ್ ಮಾಡುವುದರ ಮೂಲಕ ತಮ್ಮ ಪಾಲ್ಗೊಳ್ಳುವಿಕೆಯನ್ನು  ದೃಢಪಡಿಸಲು ಕೋರಿದೆ]
1. ಶಿವಕುಮಾರ್, ಬೆಂಗಳೂರು
2. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
3. ವಿನಯ್ ಕಾಶ್ಯಪ್, ಬೆಂಗಳೂರು
4 .ಶರಣಪ್ಪ, ಗದಗ್
5. ವಿಜಯ್ ಹೆರಗು, ಬೆಗಳೂರು
6. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
7. ಶ್ರೀ ಹರ್ಷ,ಹಾಸನ
8. ನಟರಾಜ್ ಪಂಡಿತ್,ಹಾಸನ
9. ಶ್ರೀ ನಾಥ್,ಹಾಸನ
10. ಕೆ.ವಿ.ರಾಮಸ್ವಾಮಿ, ಹಾಸನ 

ಶಿಬಿರಶುಲ್ಕವನ್ನು ಈಗಾಗಲೇ ಪಾವತಿಸಿದ್ದು  ಶಿಬಿರಾರ್ಥಿಗಳ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಶಿಬಿರಕ್ಕೆ ನೊಂದಾಯಿಸಿಕೊಳ್ಳಲು ಈಗಲೂ ಅವಕಾಶವಿದೆ. ಇಚ್ಛೆಯುಳ್ಳವರು vedasudhe@gmail.com ಗೆ ಮೇಲ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.

-ಹರಿಹರಪುರಶ್ರೀಧರ್
ಸಂಯೋಜಕ
ವೇದಭಾರತೀ, ಹಾಸನ

Tuesday 23 July 2013

ವಿವೇಕಾನಂದರ ವಿಚಾರಗಳು ಸಾರ್ವಕಾಲಿಕ



ಮೇಲಿನ ವರದಿ ಓದಿದ ಆರ್ಯಸಮಾಜ ವನ್ನು ಒಪ್ಪುವ ಶ್ರೀ ವಾಸುದೇವರಾವ್ ಮತ್ತು ನನ್ನ ನಡುವೆ ಫೇಸ್ ಬುಕ್ ತಾಣದಲ್ಲಿ   ಚರ್ಚೆ ನಡೆದು ಅಲ್ಲಿ ಪ್ರಕಟವಾದ  ಅಭಿಪ್ರಾಯಗಳನ್ನು ಇಲ್ಲಿ  ಕೂಡ  ಪ್ರಕಟಿಸಲಾಗಿದೆ.

 Vasudevarao Rao:
Swami Satya Prakash Saraswati, an eminent Vedic scholar (who worked as HOD Chemistry Dept. of Allahabad University) has remarked as under: "Dayananda all through his life stood for truth and blunt truth. He did not believe in appeasements and compromises in matters of truth. On such issues, major or minor, whatever you say, the pact between the two organizations, the Arya Samaj and the Theosophical Society, failed. Foreign collaboration was no attraction to Dayananda at the cost of basic truth. I do not think, how Vivekananda would have reacted on such issues. Vivekananda had a built of plastic material, which could be easily moulded; but Dayananda was a hard granite rock. In some matters, Vivekananda appears to be traditional Hindu. He also very much wanted to establish Veda Pathashalas or the Vedic Colleges to eradicate superstitions from the Hindu Mind, but his concept of the Vedas essentially differed from the concept of Dayananda and ancient Rishis. Dayananda and Vivekananda both wanted to integrate the theological concepts and theological creeds. Dayananda invited in India the leaders of several sections to work together for the benefit of mankind : Dayananda loved Muslims, Christians, Buddhists, Jains and Hindus alike. He wanted them to mete their differences round a table and chalk out a G.C.M. (as I have already pointed out). The objective of Vivekananda was also the same, but instead of evolving G.C.M. or H.C.F., he stood for L.C.M. – the Lowest Common Factor; this, in other words, means, that you accept my superstitions, and I accept your superstitions : you tolerate my frauds and credulities, and I shall not speak against yours. And here Dayananda differs from Vivekananda. And therefore, for a section of people, Vivekananda is more convenient than Dayananda. And we know, Truth is, however, a hard task master; it does not submit to compromises and appeasements. And consequently, all laurels to them who have courage to live and die for Truth.

 ಹರಿಹರಪುರ ಶ್ರೀಧರ್ :- ವಾಸುದೇವರಾಯರೇ, ನಿಮ್ಮ ವಿಚಾರಕ್ಕೆ ನನ್ನದೂ ಸಮ್ಮತಿ ಇದೆ. ಇಂತಾ ಸಂದರ್ಭ ಎದುರಾದಾಗ ಸುಧಾಕರಶರ್ಮರೊಡನೆ ಜಗಳ ಮಾಡುವುದು ಮಾಮೂಲಾಗಿ ಬಿಟ್ಟಿದೆ. ಆರ್ಯ ಸಮಾಜದ ಅನುಯಾಯಿಗಳು ಸ್ವಲ್ಪ ವಿಶಾಲವಾಗಿ ವಾಸ್ತವ ಸಂಗತಿಗಳನ್ನೂ ಗಮನಿಸಬೇಕು. ವಾಸ್ತವ ಅಂಶವೇನೆಂದರೆ ವಿವೇಕಾನಂದರು ಜನರಿಗೆ ಗೊತ್ತಿರುವಷ್ಟು ದಯಾನಂದರು ಗೊತ್ತಿಲ್ಲ. ಕೆಲವು ಸಂಗತಿಗಳು ತಾಳೆಯಾಗದಿದ್ದರೂ ಹಲವು ಅಂಶಗಳಲ್ಲಿ ಇಬ್ಬರೂ ಮಾನ್ಯರೇ ಆಗಿದ್ದಾರೆ. ಸಮಾಜವಿರೋಧಿ ಶಕ್ತಿಗಳನ್ನು ವಿರೋಧಿಸಬೇಕೇ ಹೊರತೂ ನಾವು ಇಂತಹ ಮಹಾಪುರುಷರ ಬಗ್ಗೆ ತಾಳೆಮಾಡುತ್ತಾ ಕೂರುವ ಕಾಲವಲ್ಲಾ, ಇದು. ನಾನಂತೂ ಮೂಲತ: RSS. ಆದರೆ ಆರ್ಯ ಸಮಾಜದ ಬಹುಪಾಲು ವಿಷಯಗಳು ನನಗೆ ಒಪ್ಪಿಗೆ ಆಗುತ್ತವೆ ,ವೇದದ ಕಾರನದಿಂದ. ಆದರೆ ಇನ್ನು ಹಲವು ಸಂಗತಿಗಳಿಗೆ RSS ಗೆ ಸರಿಸಾಟಿ ಇಲ್ಲ. ಅದಕ್ಕೇ ಶರ್ಮರು ಹೇಳುತ್ತಿರುತ್ತಾರೆ " RSS Body with Vedik mind" ನಮ್ಮ ದೇಶಕ್ಕೆ ಬೇಕೆಂದು. ನಾನಂತೂ ಹಾಸನದಲ್ಲಿ ವೇದ ಭಾರತೀ ಸಂಸ್ಥೆಯ ಹೆಸರಲ್ಲಿ ಮಾಡುತ್ತಿರುವುದು ಅದೇ ಕೆಲಸ. ಅದರಲ್ಲಿ ಖುಷಿ ಇದೆ. ಒಂದಿಷ್ಟು ಸಾಧಿಸುವ ನಂಬಿಕೆ ಇದೆ. 

 Vasudevarao Rao:-
ವಿವೇಕಾನಂದರು ಪರಿಚಯವಿರುವಷ್ಟು ದಯಾನಂದರು ಗೊತ್ತಿಲ್ಲವೆಂಬ ಅಂಶ ನಿಜ. ವಿವೇಕಾನಂದರನ್ನು ಜನಪ್ರಿಯಗೊಳಿಸುವಲ್ಲಿ RSS ನ ಪಾತ್ರ ಬಲುದೊಡ್ಡದು. ಇದಕ್ಕೆ ಕಾರಣವೂ ಇದೆ. ಸಂಘದ ದ್ವಿತೀಯ ಸಂಘಚಾಲಕರಾಗಿದ್ದ ಗುರೂಜಿಯವರು ಪೂರ್ವಾಶ್ರಮದಲ್ಲಿ ರಾಮಕೃಷ್ಣ ಆಶ್ರಮದ ಸಂನ್ಯಾಸಿಯಾಗಿದ್ದರು. ಹೀಗಾಗಿ ಅವರಿಗೆ ವಿವೇಕಾನಂದರ ಬಗ್ಗೆ ಒಲವಿತ್ತು. ಸಂಘದ ಸ್ವಯಂಸೇವಕರು ಇದನ್ನೇ ಅನುಸರಿಸಿದರು. ತಪ್ಪೇನಿಲ್ಲ. ಆದರೆ ನಿಷ್ಠುರತೆ, ಸತ್ಯಕ್ಕೆ ನಿಷ್ಠರಾಗಿದ್ದ ದಯಾನಂದರಿಗೆ ಸಲ್ಲಬೇಕಾದ ಗೌರವ ಮಾನ್ಯತೆಗಳು ಸಂಘದ ವತಿಯಿಂದ ದೊರಕಲೇ ಇಲ್ಲ. ಎಲ್ಲರೊಂದಿಗೂ ರಾಜಿಮಾಡಿಕೊಳ್ಳುವ ಸಂಘದ ಸ್ವಯಂ ಸೇವಕರ ಮನೋಭಾವ ಮತ್ತು ಸತ್ಯದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದ ಮನೋಭಾವ ಇವರೆಡರ ನಡುವೆ ದಯಾನಂದರು ಜನಪ್ರಿಯರಾಗಲಿಲ್ಲ. ಅಷ್ಟೇ. ವಿವೇಕಾನಂದರು ಒಂದು ದಂದ್ವ ವೈಕ್ತಿತ್ವ. ಸಭೆಯನ್ನು ನೋಡಿ ಮಾತನಾಡುವ ಶೈಲಿ ಅವರಿಗೆ ಕರಗತವಾಗಿತ್ತು. ಸತ್ಕಕ್ಕೆ ವಿಷಯ ದೂರವಾದರೂ ಅವರು ಅದರಿಂದ ವಿಚಲಿತರಾಗಲಿಲ್ಲ. ಸಂಘ ಪ್ರತಿಪಾದಿಸುವ ಗೋಭಕ್ತಿ, ಹಿಂದಿ ನಿಷ್ಠೆ ಮತ್ತು ದೇಶ ಪ್ರೇಮ, ಸಸ್ಯಾಹಾರ, ಮುಂತಾದ ವಿಷಯಗಳಲ್ಲಿ ಸಂಘ ಪ್ರತಿಪಾದಿಸುವ ವಿಚಾರಕ್ಕೂ ವಿವೇಕಾನಂದರು ಪ್ರತಿಪಾದಿಸುವ ವಿಚಾರಕ್ಕೂ ತಾಳಮೇಳವಿಲ್ಲ. ಆದರೂ ವಿವೇಕಾನಂದರು ಸಂಘಕ್ಕೆ ಅದರ್ಶ. ಆದರೆ ಇಂತಹ ವಿಷಯಗಳಲ್ಲಿ ಸಂಘ ವಿಚಾರಕ್ಕೆ ಹತ್ತಿರವಿರುವ ದಯಾನಂದರು ಸಂಘದಿಂದ ದೂರ. ಇದೊಂದು ವಿಪರ್ಯಾಸವೇ ಸರಿ. ಈ ಬಗ್ಗೆ ನಾನು ಹೆಚ್ಚು ಹೇಳುವ ಅಗತ್ಯವಿಲ್ಲ. ಖಂಡಿತವಾದಿ ಲೋಕವಿರೋಧಿ. ದಯಾನಂದರು ಸತ್ಯ ನುರಿದರೆಂದೇ ಸಂಘಕ್ಕೆ ಪಥ್ಯವಾಗಲಿಲ್ಲ.

 ಹರಿಹರಪುರ ಶ್ರೀಧರ್:-
 ರಾಯರೇ, ವೇದದ ಬಗ್ಗೆ ಗೌರವ ಎಲ್ಲರಿಗೂ ಇದೆ. ಆದರೆ ಸಂಘ ಹುಟ್ಟುವುದಕ್ಕಿಂತ ಮುಂಚಿನಿಂದಲೂ ವೈದಿಕ ಚಿಂತನೆ ಕಡಿಮೆಯಾಗಿ ಕಥೆ ಪುರಾಣದ ಕಡೆ ಸಮಾಜವನ್ನು ತಿರುಗಿಸಿ,ಅಡಗೂಲಜ್ಜಿ ಕಥೆಗಳನ್ನು ಹೇಳಿಕೊಂಡುಬಂದು ಜನರನ್ನು ವಂಚಿಸಿಯಾಗಿತ್ತು. ಹಿಂದುಗಳಲ್ಲಿ ಒಗ್ಗಟ್ಟಿರಲಿಲ್ಲವಾದ ಕಾರಣ ಹಿಂದುಗಳಲ್ಲಿ ಜಾಗೃತಿ ಉಂಟುಮಾಡಲು ಡಾ|| ಹೆಡಗೇವಾರ್ 1925 ರಲ್ಲಿ RSS ಆರಂಭಿಸಿದ್ದು ನಿಮಗೆ ಗೊತ್ತಿದೆ.ಆಗಲೇ ಹೆಡಗೇ ವಾರರೂ ಆರ್ಯಸಮಾಜದ ಹಾದಿಯಲ್ಲಿ ಹೊರಟಿದ್ದರೆ ಇಂದು ಆರ್ಯಸಮಾಜವೂ ಇರುತ್ತಿರಲಿಲ್ಲ, ಹಿಂದು ಸಮಾಜವೂ ಇರುತ್ತಿರಲಿಲ್ಲ.ಕಾರಣ ಆ ಹೊತ್ತಿಗಾಗಲೇ ಅಷ್ಟೊಂದು ಆಕ್ರಮಣ ನಮ್ಮ ದೇಶದ ಮೇಲೆ ನಮ್ಮ ಧರ್ಮದ ಮೇಲೆ ನಡೆದಿರುವುದು ಇತಿಹಾಸ. ಆ ಸಂದರ್ಭದಲ್ಲಿ ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸಿ, ತನ್ಮೂಲಕ ದೇಶದ ತರುಣರಲ್ಲಿ ದೇಶಭಕ್ತಿಯನ್ನೂ ತುಂಬಿ ಅದ್ಭುತವಾದ ಸಂಘಟನೆಯಾಗಿ RSS ಬೆಳೆಯುವಾಗ ಅದು ಅನುಭವಿಸಿದ ನೋವು ಅಷ್ಟಿಷ್ಟಲ್ಲ, ಅಪಹಾಸ್ಯ, ತಿರಸ್ಕಾರ,ವಿರೋಧಗಳನ್ನು ಎದುರಿಸಿ ಜನಸಾಮಾನ್ಯರಲ್ಲಿ ತಲುಪುವಾಗ ರಾಜಕೀಯ ಎದುರಾಳಿಗಳಿಗೆ ನಡುಕ ಉಂಟಾಗಿ ಅವರ ವಿರೋಧ ಮತ್ತು ಅಹಿಂದುಗಳ ವಿರೋಧ, ಹಾಗೂ ವಿಚಾರವಾದದ ಹೆಸರಿನಲ್ಲಿ ವಿರೋಧ, ಎದುರಿಸುತ್ತಿರುವ ಏಕೈಕ ಸಂಘಟನೆ RSS ಆಗಿದೆ. ಈಗ ಹೇಳಿ, RSS ವೇದಕ್ಕೆ ಅನುಗುಣವಾಗಿ ನಡೆದಿದ್ದರೆ ದೇಶದಲ್ಲಿರುವ ಲಕ್ಷಾಂತರ ಮಠಮಂದಿರಗಳು/ದೇವಾಲಯಗಳು/ಪುಣ್ಯಕ್ಷೇತ್ರಗಳ ಭಕ್ತರ ವಿರೋಧವನ್ನೂ ಕಟ್ಟಿಕೊಳ್ಳಬೇಕಿತ್ತು. ಕಾರಣ ಗೊತ್ತೇ ಇದೆ, ವೇದವು ಮೂರ್ತಿ ಪೂಜೆಯನ್ನೇ ಒಪ್ಪುವುದಿಲ್ಲ. ಅದೇ ದೊಡ್ದ ಸಮಸ್ಯೆ ಇರುವುದು. ಭಗವಂತನು ನಿರಾಕಾರಿ ಎಂಬುದೇ ಸತ್ಯ. ಅದನ್ನು ಸಮಾಜದ ಕೆಳಮಟ್ಟಕ್ಕೆ ಮುಟ್ಟಿಸಲಾದೀತೇ? ಮತ್ತೊಂದು ಕಡೆ ಸಾವಿರ ವರ್ಷಗಳಿಂದ ಬೆಳೆದು ಹೆಮ್ಮರವಾಗಿರುವ ಪುರೋಹಿತಶಾಹಿ ವರ್ಗ! ನೋಡೀ, RSS ಸರಿಯಾದ ನಿಲುವನ್ನೇ ತೆಗೆದುಕೊಂಡಿದೆ. ಈಗೀಗ ನಮ್ಮಂತವರಿಗೆ ವೇದ ಬೇಕಾಗಿದೆ. ನಮ್ಮಂತವರ ಸಂಖ್ಯೆ ಹೆಚ್ಚಲು ಇನ್ನುಮುಂದೆ ಹೆಚ್ಚುಕಾಲ ಬೇಕಿಲ್ಲ. ಇಂದಿನ ಜನರಿಗೆ ವೇದದ ಅರಿವು ಮೂಡಿಸುವುದು ಹಿಂದಿಗಿಂತಲೂ ಸುಲಭ. ಈಗಾಗಲೇ RSS ವತಿಯಿಂದಲೂ ವೇದದ ಗುರುಕುಲಗಳು ನಡೆಯುತ್ತಿವೆ. ವೇದದ ಕೆಲಸಕ್ಕೇ ಹೆಚ್ಚಿನ ಆಧ್ಯತೆ ಸಿಗುವ ಕಾಲ ದೂರವಿಲ್ಲ. ನಿಜವಾಗಿ RSS ದೇಶ ಕಟ್ಟುವ ಕೆಲಸ ಮಾಡಿಕೊಂಡು ಹೋಗುತ್ತಿದೆ. ಅದರ ಕೆಲಸ ಅದು ನೂರು ಪ್ರತಿಶತ ಪ್ರಯತ್ನ ಹಾಕಿ ಮಾಡುತ್ತಿದೆ. ವೇದಕ್ಕೆ ಅಡಚಣೆಯಾಗಿರುವವರು ಮೌಢ್ಯವನ್ನು ಹೆಚ್ಚಿಸುತ್ತಿರುವ ವೇದವನ್ನು ಅರೆದುಕುಡಿದಿರುವ ಪಂಡಿತರುಗಳೇ ಎಂಬುದು ವಿಪರ್ಯಾಸ!

Sunday 16 June 2013

ವಿವೇಕಾನಂದ ಚಿಂತನ-ಮಂಥನ


ಶ್ರೀದತ್ತ  ಅವರಿಂದ ಪ್ರಾರ್ಥನೆ



ಪ್ರಬುದ್ಧ ವಿಭಾಗದ ಜಿಲ್ಲಾ ಪ್ರಮುಖರಾದ ಶ್ರೀ ಕವಿನಾಗರಾಜರಿಂದ ಪ್ರಾಸ್ತಾವಿಕ


ಪ್ರಾಂತ ಸಮಿತಿಯ ಸದಸ್ಯರಾದ ಡಾ|| ಜನಾರ್ಧನ್ ಅವರಿಂದ ಸ್ವಾಗತ ಪರಿಚಯ

ಶ್ರೀ  ವಿ.ನಾಗರಾಜ್ ಅವರಿಂದ ಉಪನ್ಯಾಸ



ಜಿಲ್ಲಾ ಸಂಯೋಜಕ ಶ್ರೀ ಹರಿಹರಪುರಶ್ರೀಧರರಿಂದ  ಆಭಾರ ಮನ್ನಣೆ
ಮತ್ತು ಮುಂದಿನ  ಕಾರ್ಯ ಯೋಜನೆ  ಕುರಿತು ನಾಲ್ಕು ಮಾತು

            ಅದೊಂದು ಅದ್ಭುತ ಕಾರ್ಯಕ್ರಮ. ಹಾಸನದ ಕನ್ನಡ ಸಾಹಿತ್ಯಪರಿಷತ್ ಭವನದೊಳಗೆ ವಿವೇಕಾನಂದ ವಿಚಾರಧಾರೆ ಹರಿಯುತ್ತಿದ್ದರೆ ಭವನದ ಹೊರಗೆ  ವರ್ಷಧಾರೆ! ಮಳೆಗೆ ಅಂಜದೆ ಅಭಿಮಾನಿಗಳು ಮಧ್ಯಾಹ್ನ 4.30 ರ ಕಾರ್ಯಕ್ರಮಕ್ಕೆ  10ನಿಮಿಷ ಮುಂಚಿತವಾಗಿಯೇ ಹಾಜರಿದ್ದರು. ಶ್ರೀ ವಿ ನಾಗರಾಜರ ಮಾತುಗಳಿಗೆ ಅಕ್ಷರ ರೂಪ ಕೊಡುವ ಬದಲು ಅವರ ಅದ್ಭುತವಾದ ಉಪನ್ಯಾಸದ ವೀಡಿಯೋ ವನ್ನು ಒಂದೆರಡು ದಿನಗಳಲ್ಲಿ ಅಳವಡಿಸುವೆ. ಅಂತೂ ಹಾಸನದಲ್ಲಿ ವಿವೇಕಾನಂದರ 150ನೇ ಜನ್ಮ ವರ್ಷದ ಕಾರ್ಯಕ್ರಮಗಳು  ಈ ಕಾರ್ಯಕ್ರಮದಿಂದ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.


ಸ್ಥಳೀಯ ಪತ್ರಿಕೆ "ಜನಮಿತ್ರ"ದಲ್ಲಿನ ವರದಿ

ವಿವೇಕಾನಂದ ವಿಚಾರಧಾರೆಯ ಚಿಂತನ -ಮಂಥನ:
ಹಾಸನ: ಸ್ವಾಮಿ ವಿವೇಕಾನಂದರ ಸಾರ್ಧಶತಮಾನೋತ್ಸವ ಸಮಿತಿಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ  ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 
            ಚಿಂತಕರಿಗಾಗಿ ವಿವೇಕಾನಂದ ವಿಚಾರಧಾರೆಯ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ಶ್ರೀ ವಿ.ನಾಗರಾಜ್ , ದೇಶದ ರಾಷ್ಟ್ರೀಯ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ರಾಷ್ಟ್ರ ಭಕ್ತ, ಪ್ರಾಚೀನ ಮತ್ತು ಆಧುನಿಕ ಚಿಂತನೆಗಳ ಸಮನ್ವಯದ ಮೂಲಕ  ರಾಷ್ಟ್ರದ ಸಮಗ್ರ ವಿಕಾಸಕ್ಕೆ  ಹೊಸ ದೃಷ್ಟಿ ನೀಡಿದ  ದಾರ್ಶನಿಕ ವಿವೇಕಾನಂದರ  ಚಿಂತನೆಗಳು ಸಾರ್ವಕಾಲಿಕವೆಂದು ನುಡಿದರು. ವಿವೇಕಾನಂದರ ವಿಚಾರಗಳನ್ನು ಇಂದಿನ ಯುವಪೀಳಿಗೆ ಅಳವಡಿಸಕೊಳ್ಳಬೇಕಾದುದು ಅತ್ಯಗತ್ಯವಾಗಿದೆ, ಎಂದರು.ಜಿಲ್ಲಾ ಸಂಯೋಜಕ ಹರಿಹರಪುರ ಶ್ರೀಧರ್, ಪ್ರಾಂತ ಸಮಿತಿಯ ಸದಸ್ಯರಾದ ಡಾ|| ಜನಾರ್ಧನ್, ಪ್ರಬುದ್ಧ ವಿಭಾಗದ ಜಿಲ್ಲಾ ಪ್ರಮುಖ್ ಶ್ರೀ ಕವಿ ನಾಗರಾಜ್ ವೇದಿಕೆಯಲ್ಲಿದ್ದರು.

Wednesday 5 June 2013

ಚಿಂತನ-ಮಂಥನ

ಓಂ
ಸ್ವಾಮಿ ವಿವೇಕಾನಂದ ಸಾರ್ಧಶತಮಾನೋತ್ಸವ ಸಮಿತಿ
ಹಾಸನ ಜಿಲ್ಲೆ

             ಯುವಜನತೆಯ ಆಶಾಕಿರಣ,ಪ್ರಾಚೀನ ಧರ್ಮ-ಸಂಸ್ಕೃತಿಗೆ ನಿಜವಾದ ಅರ್ಥಪ್ರತಿಪಾದಕ, ಧಾರ್ಮಿಕ-ಸಾಮಾಜಿಕಸುಧಾರಕ,ಪರದಾಸ್ಯವಿಮೋಚನೆಗಾಗಿಭಾರತೀಯರಲ್ಲಿರಾಷ್ಟ್ರೀಯ ಸ್ವಾಭಿಮಾನ ವನ್ನು ಬಡಿದೆಬ್ಬಿಸಿದ ರಾಷ್ಟ್ರಭಕ್ತ, ಪ್ರಾಚೀನ ಹಾಗೂ ಆಧುನಿಕ ಚಿಂತನೆಗಳ ಸಮನ್ವಯದ ಮೂಲಕ ರಾಷ್ಟ್ರದ ಸಮಗ್ರ ವಿಕಾಸಕ್ಕೆ ಹೊಸ ದೃಷ್ಟಿ ನೀಡಿದ ದಾರ್ಶನಿಕ, ಪ್ರಾಚೀನ ಹಿಂದು ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವವೇದಿಕೆಯಲ್ಲಿ ಸಮರ್ಥವಾಗಿ ಪ್ರತಿಪಾದಿಸಿ ತಾಯಿ ಭಾರತಿಯ ಕೀರ್ತಿಯನ್ನು ಜಗತ್ತಿನಾದ್ಯಂತ ಹರಡಿದ ಧೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷವನ್ನು ರಾಷ್ಟ್ರಾದ್ಯಂತ ಆಚರಿಸುತ್ತಿರುವ ಸಂದರ್ಭದಲ್ಲಿ  ಹಾಸನ ಜಿಲ್ಲೆಯ ಚಿಂತಕರಿಗಾಗಿ  ವಿವೇಕಾನಂದ ವಿಚಾರಧಾರೆಯ
ಚಿಂತನ-ಮಂಥನ
ಉಪನ್ಯಾಸ: 
ಶ್ರೀ ವಿ.ನಾಗರಾಜ್
ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ,ಬೆಂಗಳೂರು

                        ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಸಭಾಂಗಣ, ಸಾಲಗಾಮೆ ರಸ್ತೆ, ಹಾಸನ
                                          ದಿನಾಂಕ: ೧೫.೬.೨೦೧೩ ಶನಿವಾರ ಅಪರಾಹ್ನ ೪:೩೦ಕ್ಕೆ

ನಿಮಗೆ  ಆದರದ ಸ್ವಾಗತ

ಹರಿಹರಪುರಶ್ರೀಧರ್
ಜಿಲ್ಲಾ ಸಂಯೋಜಕ


[ವಿ.ಸೂ: ದಯಮಾಡಿ ಹತ್ತು ನಿಮಿಷ ಮುಂಚಿತವಾಗಿ ಬನ್ನಿ]

Thursday 11 April 2013

ಭವ್ಯ ಭಾರತದ ರೂವಾರಿಗಳು

ಇಂದು ಯುಗಾದಿ. RSS ಸಂಸ್ಥಾಪಕರಾದ ಪರಮ ಪೂಜ್ಯ ಡಾ. ಕೇಶವ ಬಲಿರಾಮ್ ಹೆಡಗೇವಾರರ ಜನ್ಮ ದಿನವೂ ಹೌದು. ಭವ್ಯ ಭಾರತ ಶಿಲ್ಪಿಗಳಿಗೆ ಚಿತ್ರ ನಮನ.
ಭವ್ಯ ಭಾರತದ ಕನಸು ಕಂಡ ಸ್ವಾಮಿ ವಿವೇಕಾನಂದರು


ಸ್ವಾಮೀಜಿ ಕನಸು ನನಸು ಮಾಡಲು  ಸಂಘದ ಸಸಿ ನೆಟ್ಟವರು ಡಾ. ಕೇಶವ ಬಲಿರಾಮ ಹೆಡಗೇವಾರ್

ಸಂಘವನ್ನು ಹೆಮ್ಮರವಾಗಿ ಬೆಳೆಸಿದವರು ಶ್ರೀ ಗುರೂಜಿ ಗೊಲ್ವಾಲ್ಕರ್

529809_570211059674276_1332438964_n
ಬೃಹತ್ ಸಂಘಟನೆಯ ಇಂದಿನ ನೇತೃ ಡಾ. ಮೋಹನ್ ಜಿ ಭಾಗ್ವತ್

Tuesday 12 February 2013

ವಿವೇಕಾನಂದರ ವಿಚಾರಗಳನ್ನು ಹೃದಯದಲ್ಲಿ ತುಂಬಿಕೊಳ್ಳೋಣ




ಯುವಕರು ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಹೃದಯದಲ್ಲಿ ತುಂಬಿಕೊಂಡು ಸಮಾಜಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಮಾತ್ರ ಯುವ ದಿವಸವನ್ನು ಸ್ವಾಮೀಜಿಯವರ ಹೆಸರಲ್ಲಿ ಆಚರಿಸಿದ್ದು ಸಾರ್ಥಕವಾದೀತು, ಎಂದು  ಸ್ವಾಮಿ ವಿವೇಕಾನಂದ150ನೇ ಜನ್ಮ ವರ್ಷಾಚರಣೆಯ  ಹಾಸನ ಜಿಲ್ಲಾ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಕರೆ ನೀಡಿದರು.ಅವರು ಹಾಸನದ  ಶ್ರೀಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಹಾಸನ ತಾಲ್ಲೂಕು  ಚನ್ನಂಗಿಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.    ಚಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ    ಮತ್ತು ಅದರ ಪರಿಣಾಮ ವಾಗಿ ಅಮೆರಿಕೆಯ ಜನರಲ್ಲಿ ಉಂಟಾದ ವೈಚಾರಿಕ ಪರಿವರ್ತನೆಯ ಬಗ್ಗೆ ಶ್ರೀಯುತರು   ಎಳೆ ಎಳೆಯಾಗಿ ವಿವರಿಸದರು. ವಿದ್ಯಾರ್ಥಿಗಳು ಶಿಬಿರದಲ್ಲಿ ಇರುವ ನಾಲ್ಕು ದಿನಗಳಲ್ಲಿ ಮುಂದೆಯೂ ಗ್ರಾಮಸ್ಥರ ನೆನಪಿನಲ್ಲಿರುವಂತಹ ಸಾಮಾಜಿಕ ಕಾರ್ಯವನ್ನು ಮಾಡಬೇಕೆಂದು ಕರೆ ಕೊಟ್ಟರು. ಶ್ರೀಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಗುರುರಾಜ ಜಹಾಗಿರ್ದಾರ್ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದರು.ಶಿಬಿರ ಸಂಯೋಜಕರಾದ ಪ್ರೊ. ಪಾಂಡುರಂಗ ಮತ್ತು ಊರಿನ ಪ್ರಮುಖರು ವೇದಿಕೆಯಲ್ಲಿದ್ದರು.

Sunday 3 February 2013

ಮಂಗಳೂರಿನಲ್ಲಿ ಐತಿಹಾಸಿಕ ಯುವ ದರ್ಶನ



ಅಬ್ಭಾ! ಒಂದು ಕರಪತ್ರವಿಲ್ಲ, ಒಂದು ಫ್ಲೆಕ್ಸ್ ಇಲ್ಲ, ಒಂದು ಬಂಟಿಂಗ್ಸ್ ಇಲ್ಲ,.....ಆದರೆ ಮನೆ ಮನೆಗೆ ಹೋಗಿ ಯುವಕರನ್ನು ಮಾತನಾಡಿಸಿ ಮಹಾ ಸಾಂಘಿಕ್ ಗೆ ಹೊರಡಿಸುವ ಕೆಲಸ ಮಾತ್ರ ಯಜ್ಞ ದಂತೆ ನಡೆದಿತ್ತು. RSS ಕಾರ್ಯಕರ್ತರು ಮನೆ ಮಠ ತೊರೆದರು,ಅವರ ಕಣ್ಮುಂದೆ ಒಂದೇ ವಿಚಾರ ಫೆಬ್ರವರಿ 3ಕ್ಕೆ ಒಂದು ಲಕ್ಷ ಯುವಕರನ್ನು ಸೇರಿಸಬೇಕು.ಎಲ್ಲರೂ ಮಂಗಳೂರು ಮತ್ತು ಮಡಕೇರಿ ಜಿಲ್ಲೆಯವರು ಮಾತ್ರ. ನೋಡುವುದಕ್ಕೆ ಹೋಗಿದ್ದ ನಮ್ಮಂತವರೂ ಸಾವಿರಾರು ಮಂದಿ ಇದ್ದೆವು. ಮಹಾ ಸಾಂಘಿಕ್ ನಡೆಯುವ ಸ್ಥಳಕ್ಕೆ ಹೋಗುವ 15 ಕಿಲೋ ಮೀಟರ್ ರಸ್ತೆ ತುಂಬ ಹೊರಟಿದ್ದ ಸ್ವಯಂಸೇವಕರ ಜನಸಾಗರ ಮತ್ತು ಸಾವಿರಾರು ವಾಹನಗಳನ್ನು ನೋಡಿ ನಮ್ಮ ಕಾರ್ ಚಾಲಕ ಸುನಿಲ್ ಹೇಳಿದ "ನಾವು ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೋಗಿರುತ್ತೆ!! RSS ಕಾರ್ಯಾಲಯ ಸಂಘನಿಕೇತನದಿಂದ ಸುಮಾರು 15 ಕಿಲೋ ಮೀಟರ್ ದೂರದ ಕಾರ್ಯಕ್ರಮದ ಮೈದಾನ ಕ್ಕೆ ಮೂರು ಗಂಟೆ ಮುಂಚೆ ಹೊರಟಿದ್ದ ನಮ್ಮ ಸ್ಥಿತಿ ಇದು.ಹೌದು ನಾವೇನೋ ಸರಿಯಾಗಿ ತಲುಪಿದೆವು. ಆದರೆ ಮಡಕೇರಿಯ ಸ್ವಯಂ ಸೇವಕರು ಮೈದಾನ ತಲುಪುವಾಗ ಸಮಾರಂಭ ಮುಗಿದಿತ್ತು. ಅವರೂ ಕೂಡ ಸಮಯಕ್ಕೆ ಸರಿಯಾಗಿಯೇ ಹೊರಟಿದ್ದರು. ಆದರೂ ಜನ ಸಾಗರದ ಮಧ್ಯೆ ಗಂಟೆಗೆ ಎರಡು ಕಿಲೋ ಮೀಟರ್ ದೂರ ಕಾರ್ ಸಾಗಲು ಕಷ್ಟವಾಗುತ್ತಿತ್ತು. ನಾನಂತೂ ಕಾರ್ ನಿಂದ ಇಳಿದು ಜನಸಾಗರದ ಮಧ್ಯೆ ನಡೆದೇ ಕಾರ್ಯಕ್ರಮ ಸ್ಥಳ ಸೇರಿದೆ. ಅಲ್ಲಿನ ಕಾರ್ಯಕರ್ತರ ಪರಿಶ್ರಮ ಕೇಳಿದರೆ ಮೈ ಝುಮ್ ಎನ್ನುತ್ತೆ. ಒಬ್ಬ ಕಾರ್ಯಕರ್ತನಂತೂ ಮನೆ ಬಿಟ್ಟು 84 ದಿನಗಳಾಗಿದೆಯಂತೆ. ನಿನ್ನೆ ರಾತ್ರಿಯೂ ಹೋಗಿರಲಾರ. ಇವತ್ತು ಹೋಗಬಹುದೇನೋ!!




ಇದು ಎಲ್ಲರಿಗೂ ತಕ್ಕ ಉತ್ತರವೇ ಹೌದು.ಸರಸಂಘಚಾಲಕರೇ ಹೇಳಿದಂತೆ RSS ಗೆ ಶಕ್ತಿ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಇಲ್ಲ.ಆದರೂ ಬೆಳೆಯುತ್ತಿರುವ ಸಂಘದ ಶಕ್ತಿ ಗೋಚರವಾಗದೆ ವಿಧಿ ಇಲ್ಲ.
ಕಂಗ್ರೆಸ್ ನವರ ಕಾಲ್ನಡಿಗೆಯಾಗಲೀ  BJP ಸೇರಿದಂತೆ  ಯಾವುದೇ ರಾಜಕೀಯ ಪಕ್ಷಗಳ ಕಾರ್ಯ ವೈಖರಿಗೂ ಸಂಘದ ಕಾರ್ಯ ಪದ್ದತಿಗೂ ಅಜಗಜಾಂತರ.




ಸಂಘದ ಕಾರ್ಯಕರ್ತನ ಹೃದಯಲ್ಲಿ ಒಂದೇ ವಿಚಾರ-ತಾಯಿ ಭಾರತಿಯ ಗೌರವ ಉಳಿಸಲು ನನ್ನ ಜೀವವನ್ನು ಒತ್ತೆ ಇಟ್ಟಾದರೂ ಹಗಲಿರಳು ಶ್ರಮಿಸಬೇಕು. ಅಷ್ಟೆ...ಅಷ್ಟೆ...ಅಷ್ಟೆ... ಬೇರೇನೂ ಚಿಂತೆ ಇಲ್ಲ. "ಸದೃಢ ಭಾರತವನ್ನು ಕಟ್ಟಲು ನಾವು ಮೀಸಲು"..ಇಷ್ಟೇ ಸ್ವಯಂಸೇವಕರ ವಿಚಾರ. ಅದರಂತೆ ಅವರ ಎಲ್ಲಾ ಕಾರ್ಯಶೈಲಿ. ವಿವೇಕಾನಂದರು ಬಯಸಿದ್ದು ಇಂತಹ ನೂರು ಜನ ಯುವಕರನ್ನು  RSS ಆದರೋ ಅಂತಹ  ಲಕ್ಷ್ಜ-ಲಕ್ಷ ಯುವಕರನ್ನು ಬೆಳೆಸುತ್ತಿದೆ. ದುಷ್ಟ ಶಕ್ತಿಗಳ ಎದೆ ನಡುಕ ಉಂಟಾಗುವಂತೆ ಬೆಳೆಯುತ್ತಲೇ ಇದೆ.



   


Some interesting things about the historic Mangaluru RSS Sanghik on Sunday.

a) 1152 villages of Dakshina Kannada, Udupi and Kodagu districts sent their youths in gaNa vesha.
b) Government police and spy agencies reported that more than 1,20,000 youth were IN gaNa vesha in the 65 acre freshly prepared ground. (Source: Kannada Prabha)
c) Traffic jams were happening even as of 1.30 PM, on a Sunday, for an afternoon event.
d) Per Bhagawat ji, this was NOT a show of strength. This was a part of Swami Vivekananda's 150th birth anniversary on the Saptami day.
e) Former CM of Karnataka Sadananda Gowda participated.
f) Anwar Manuppady, Karnataka minorities development agency's president and Franklin Montero of BJP minority morcha's VP also participated.
g) Not only Karnataka's ministers, MLAs and MLCs, even Goa's speaker Rajendra Aralikar participated.
h) This Sanghik shows how committed RSS youth are for the nation. Within 30 days, they turned 65 acres of private land of 3 owners, into a massive ground, mobilized lakhs of people and paid a fine tribute to Swami Vivekananda!

I am more than impressed!!!
- Kiran










Tuesday 29 January 2013

ನನ್ನೊಳಗಿನ ಮಾತು





ವಿವೇಕಾನಂದರ ಬಗ್ಗೆ ಭಾಷಣ ಮಾಡಿದಾಗ ನಾಲ್ಕು ಹುಡುಗರು ಚಪ್ಪಾಳೆ ತಟ್ಟಿ   ಬಿಟ್ಟರೆ………..ನೀ ಬರೆದ ಎರಡು ಲೇಖನಗಳು  ಪತ್ರಿಕೆಯಲ್ಲಿ ಪ್ರಕಟವಾಗಿ   ಬಿಟ್ಟರೆ ನೀನು ವಿವೇಕಾನಂದರೇ ಆಗಿ ಬಿಟ್ಟೆ! ಅಂದುಕೊಂಡೆಯಾ! ಮಂಕೇ, ನಿನ್ನ ಮೀರಿಸಿ ಮಾತನಾಡುವ- ಬರೆಯುವ ಸಾವಿರ ಜನ ಸಿಕ್ತಾರೆ! ಆದರೆ ಅಂದು  ಭೋರ್ಗರೆಯುವ ಸಮುದ್ರಕ್ಕೆ ಹಾರಿ ಎರಡು ಫರ್ಲಾಂಗ್ ಈಜಿಕೊಂಡು ಆ ಬಂಡೆ ಹತ್ತಿ ಕುಳಿತರಲ್ಲಾ ಅಂತಾ ಒಂದು ಸಾಹಸ ನಿನಗೆ ಮಾಡುಕ್ಕಾಗುತ್ತಾ? ಅಂದು ಅಮೆರಿಕೆಯ ಜನರಿಗೆ ವಿವೇಕಾನಂದರ ಸರಿಯಾದ ಪರಿಚಯವಾಗುವ ಮುಂಚೆ ಬಾಯಾರಿಕೆಗೆ ನೀರು ಕೇಳಿದಾಗ ಇವರ ವೇಷವನ್ನು ಕಂಡು” You begger get out”  ಅಂದಾಗ ಅವರ ಸ್ವಾಭಿಮಾನಕ್ಕೆ ಧಕ್ಕೆ ಯಾಯ್ತೆಂದು ಬೇಸರಿಸದೆ ಸುಧಾರಿಸಿಕೊಂಡರಲ್ಲಾ! ಆಪುಣ್ಯಾತ್ಮ! ಅಂತಾ ಒಂದು ಪ್ರಸಂಗ ನೀನು ಎದುರಿಸಿದ್ದೀಯಾ?
ಸಮಾಜ ನಿನ್ನನ್ನು ಸುಮ್ಮನೆ ಗುರುತಿಸಿ ತಬ್ಬಿ ಕೊಂಡು ಬಿಡುವುದಿಲ್ಲ. ಸಮಾಜಕ್ಕೆ ನಿನ್ನ ಯೋಗದಾನವೇನು? ಅಂತಾ ನಿನ್ನ ಆತ್ಮ ನಿರೀಕ್ಷಣೆ ಮಾಡಿಕೋ, ಬೇರೆಯವರ ಮುಂದೆ ಭಾಷಣ ಬಿಗಿಯುವ ಮುಂಚೆ ವಿವೇಕಾನಂದರ ಒಂದು ಅಂಶವನ್ನು ನಿನ್ನ ಜೀವನದಲ್ಲಿ ರೂಢಿಸಿಕೊಂಡಿದ್ದೀಯಾ? ಯೋಚನೆ ಮಾಡು. ನಿನ್ನ ಬಾಯಲ್ಲಿ ಸಾವಿರ  ಮಹಾನುಭಾವರುಗಳ ನುಡಿಗಳೇ ಉದುರಿಬೀಳಬಹುದು, ಆದರೆ ಅವರ ಯಾವ ಗುಣವನ್ನು ನೀನು ನಿನ್ನಲ್ಲಿ ಅಳವಡಿಸಿಕೊಂಡಿದ್ದೀಯಾ?
ಹೌದು, ಒಮ್ಮೆ ಆತ್ಮ ನಿರೀಕ್ಷಣೆ ಮಾಡಿಕೋ. ನಿಜವಾಗಿ ನಿನಗೆ  ನಮ್ಮ ದೇಶದ ಸಮಸ್ಯೆಗಳ     ಬಗ್ಗೆ ಕಾಳಜಿ ಇದೆಯೇ? ಹಾಗಾದರೆ ಸಮಾಜಕ್ಕೆ ನಿನ್ನ ಯೋಗದಾನವೇನು?
ನನ್ನೊಳಗೆ ಬಂದ ಚಿಂತನೆಗಳು ನನ್ನನ್ನು ಬೆಚ್ಚಿಬೀಳುವಂತೆ ಮಾಡಿದ್ದವು! ಆದರೆ ಬೆಚ್ಚಿ ಬೀಳ   ಬೇಕಾಗಿಲ್ಲ,ಎಂಬ ಒಳ ಅರಿವು ನನ್ನನ್ನು ಎಚ್ಚರಿಸಿತ್ತು. ನೋಡು, ನಿನ್ನ ಅಂತಸ್ಸಾಕ್ಷಿಗೊಪ್ಪುವಂತೆ ನೀನು ಏನಾದರೂ ಸಚ್ಚಿಂತನೆ ಮಾಡಿ ನಿನ್ನ ಜೀವನವನ್ನು ರೂಪಿಸಿಕೊಂಡಿದ್ದೀಯಾ? ಅದರಂತೆ ಸಾಗು, ಯಾರೂ ವಿವೇಕಾನಂದರಾಗಲು ಸಾಧ್ಯವಿಲ್ಲ. ಅದು ಪುಕ್ಕಟೆ ಪುನಗಲ್ಲ. ಅಂದರೆ ನಿರಾಶರಾಗಬೇಕಿಲ್ಲ.  ಯಾರಂತೆ ಯಾರೂ ಪೂರ್ಣವಾಗಿ ಆಗಲು ಸಾಧ್ಯವಿಲ್ಲ. ಅವರವರ ವ್ಯಕ್ತಿತ್ವ ಅವರವರಿಗೆ ದೊಡ್ದದು. ನಿನ್ನಲ್ಲಿರುವ ಯಾವುದೋ ಒಂದು ಗುಣ ಬೇರೆಯವರಲ್ಲಿ ಇಲ್ಲದಿರಬಹುದು. ಯಾವುದೋ ಒಂದು ವಿಚಾರದಲ್ಲಿ ನಿನ್ನಂತೆ ಅವರಾಗದಿರಬಹುದು. ಆದರೆ ನೀನೂ ಕೂಡ ಅವರಂತಾಗಲು ಸಾಧ್ಯವಿಲ್ಲ.
ಹೌದಲ್ವಾ? ನಾವು ವಿವೇಕಾನಂದರಂತಾಗಬೇಕೆಂಬುದು ಸರಿಯಾಗೇ ಇದೆ. ಆದರೆ ವಿವೇಕಾನಂದರೇ ನೀನಾಗಲಿಲ್ಲ ಎಂಬ ಚಿಂತೆ ಬೇಡ. ಶಿವನನ್ನು ಪೂಜಿಸುತ್ತಾ ಶಿವನೇ ಆಗಬೇಕೆಂಬುದೇ ಸರಿ. ಇದು ಆದರ್ಶ. ಆದರೆ ಆ ದಿಕ್ಕಿನಲ್ಲಿ ಹೊರಟಿರುವೆಯಾ? ಇಂದಲ್ಲಾ ನಾಳೆ ನಾನು ವಿವೇಕಾನಂದರೇ ಆಗುತ್ತೀನೆಂಬ ವಿಶ್ವಾಸ ನಿನಗಿರಲಿ. ಆದರೆ ಅಗಲಿಲ್ಲವಲ್ಲಾ! ಎಂಬ ಚಿಂತೆ ಬೇಡ. ಹಲವರು ಎಡವುವುದು ಇಲ್ಲೇ .ನಾನು ಅವರಂತಾಗಲಿಲ್ಲಾ! ಎಂದು ಕೊರಗುವುದು! ಕೊರಗಿದರೆ ಕೊರಗಬಹುದು ಅಷ್ಟೆ. ನಿನ್ನ ಹೊಟ್ಟೆ ತುಂಬಲು ನೀನೇ ತಿನ್ನಬೇಕು.

ಎಚ್ಚರ:-
ಒಂದು ಎಚ್ಚರ ವಹಿಸುವುದು ಅತ್ಯಗತ್ಯ. ನೀನು ಸಮಾಜಕ್ಕೆ ಮಾಡಬೇಕಾಗಿರುವುದು ಇನ್ನೂ ಸಾಕಷ್ಟಿದೆ, ನಾನೇನೂ ಅಲ್ಲ, ಎಂದು  ನಿನ್ನೊಳಗೆ ಚಿಂತನ-ಮಂಥನ ಆರಂಭವಾಗಿದ್ದರೆ ಅದು ಒಳ್ಳೆಯದೇ,ನಿನ್ನ ಅಂತರಾಳದ ಕರೆಗೆ ನೀನು ಓಗೊಡು, ಹೆಜ್ಜೆ ಮುಂದುವರೆಸು. ಆದರೆ ಯಾರೋ  ನಿನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ’ ಕೇವಲ ಭಾಷಣ   ಮಾಡುವುದಲ್ಲಾ, ವಿವೇಕಾನಂದರಂತೆ  ಬದುಕಬೇಕು, ಎಂದು ಉಪದೇಶಮಾಡಿದರೆ, ಇಲ್ಲಿ ನಿನ್ನ ವಿವೇಕ ಜಾಗೃತವಾಗಬೇಕು. ನಿನ್ನ ಬಗ್ಗೆ ನೀನು  ಎಚ್ಚರವಾಗಿರುವುದಷ್ಟೇ ಅಲ್ಲ, ನಿನಗೆ ಅವರ ಬಗ್ಗೆಯೂ ವಿಚಾರ ಗೊತ್ತಿರಬೇಕು. ನಿನಗೆ ಉಪದೇಶಮಾಡಿದವರಿಗೆ ಅರ್ಹತೆ ಇದೆಯೇ? ಸಮಾಜಕ್ಕೆ ಅವನ ಯೋಗದಾನವೇನು? ಅವನು ಪ್ರಾಮಾಣಿಕನೇ? ನಿಸ್ವಾರ್ಥನೇ? ಎಲ್ಲವನ್ನೂ ತಿಳಿದು ಅವನ ಮಾತನ್ನು ಸ್ವೀಕರಿಸಬೇಕೆನಿಸಿದರೆ,ಸ್ವೀಕರಿಸು ,ಹಾಗಿಲ್ಲದೆ ಅವನೇ ಒಬ್ಬ ದೊಡ್ಡ ಬ್ರಷ್ಟ,ಅಪ್ರಾಮಾಣಿಕ,ಎಂಬುದು ನಿನಗೆ ಖಾತ್ರಿಯಾಗಿದ್ದರೆ ಅವನು ಎಷ್ಟೇ ಪಂಡಿತನಿರಲಿ ಅವನನ್ನು ಉದಾಸೀನ ಮಾಡು. ಅವನ ಉದ್ಧೇಶವಾದರೂ ನಿನಗೆ ಅಪಮಾನ ಮಾಡಬೇಕೆಂಬುದೇ ಆಗಿದ್ದು ಖಾತ್ರಿಯಾಗಿದ್ದರೆ ನಿನ್ನ ಪ್ರಾಮಾಣಿಕತೆಯ ಗುರಾಣಿಯನ್ನು ಅವನಮೆಲೆ ಬಲವಾಗಿಯೇ ಪ್ರಯೋಗಿಸು.ಅವನು ಬಂಡ ನೆಂದಾದರೆ “ಅದೊಂದು ಕೊಚ್ಚೆ” ಎಂದು ತಿಳಿದರೆ ಖಂಡಿತವಾಗಿಯೂ ಅದರ ಮೇಲೆ ಕಲ್ಲೆಸೆಯಬೇಡ. ಕೊಚ್ಚೆ ನಿನ್ನ ಮುಖಕ್ಕೇ ಹಾರುತ್ತದೆ. ಉದಾಸೀನಮಾಡಿಬಿಡು.

Sunday 27 January 2013

ಸಂಘವು ಕ್ರೈಸ್ತ ಅಥವಾ ಮುಸ್ಲಿಮ್ ವಿರೋಧಿಯಲ್ಲ- ಮಾನ್ಯಶ್ರೀ ಮಂಗೇಶ್ ಭೇಂಡೆ









ಭಾವೀ ಭಾರತದ ಬಗ್ಗೆ  ಸ್ವಾಮೀ ವಿವೇಕಾನಂದರಿಗೆ ಯಾವ ಚಿಂತನೆ ಇತ್ತೋ ಅದೇ ಹಾದಿಯಲ್ಲಿ ವ್ಯಕ್ತಿ ನಿರ್ಮಾಣ ಮಾಡುತ್ತಾ ಅವರ ಕನಸನ್ನು ನನಸು ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕೆಲಸ ಮಾಡುತ್ತಿರುವುದಾಗಿ ಖSS ನ  ಅಖಿಲ ಭಾರತ ಸಹವ್ಯವಸ್ಥಾ ಪ್ರಮುಖರೂ,  ಆಂದ್ರ ಪ್ರದೇಶ ಮತ್ತು ಕರ್ನಾಟಕ ಪ್ರಾಂತಗಳನ್ನೊಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಪ್ರಚಾರಕರೂ ಆದ ಮಾನ್ಯಶ್ರೀ ಮಂಗೇಶ್ ಭೇಂಡೆವರು  ಹಾಸನ ಜಿಲ್ಲಾ ಖSS ಹಾಸನದ ಸರ್ಕಾರೀ ಹೈಸ್ಕೂಲ್ ಮೈದಾನದಲ್ಲಿ  ಸಂಯೋಜಿಸಿದ್ದ  “ಯುವ ಶಕ್ತಿ ಸಂಗಮದಲ್ಲಿ “ ಪ್ರಧಾನ ಭಾಷಣ ಮಾಡುತ್ತಾ  ತಿಳಿಸಿದರು.

ಮುಂದುವರೆದು ಮಾತನಾಡುತ್ತಾ  “ಒಂದು ಕಾಲದಲ್ಲಿ ಜಗದ್ಗುರುವಾಗಿದ್ದ ಭಾರತವು ಪರಕೀಯರ ಗುಲಾಮರಾಗಿ ನೂರಾರು ವರ್ಷ ಬದುಕುವ ದು:ಸ್ಥಿತಿಗೆ ಕಾರಣ ವನ್ನು ಹುಡುಕಿಕೊಳ್ಳ ಬೇಕೆಂದು ತಿಳಿಸಿದರು.ನಮ್ಮ ದು:ಸ್ಥಿತಿಗೆ ಬೇರೆ ಯಾರನ್ನೂ ನಿಂದಿಸಿ ಪ್ರಯೋಜನವಿಲ್ಲ, ಈ  ದೇಶದಲ್ಲಿ  ಪರಿವರ್ತನೆಯಾಗಬೇಕಾದರೆ ಈ ದೇಶದ ಮಕ್ಕಳಲ್ಲಿ ದೇಶಭಕ್ತಿಯ ಜಾಗೃತಿಯಾಗಬೇಕೆಂದರು. ಖSS ಕಳೆದ ೮೭ವರ್ಷದಿಂದ ಇದೇ ಕೆಲಸವನ್ನು ಮಾಡುತ್ತಾ ಲಕ್ಷಾಂತರ ಸ್ವಯಂಯಂ ಸೇವಕರಿಗೆ ದೇಶ ಭಕ್ತಿಯ ಸಂಸ್ಕಾರವನ್ನು ನೀಡಿ  ಸಮಾಜದ ಹಲವು ಕ್ಷೇತ್ರಗಳಲ್ಲಿ ಅವರು ಸಕ್ರಿಯರಾಗುವಂತೆ ಮಾಡಿದೆ . ವಿವೇಕಾನಂದರ ಕರೆಯಂತೆ ಸ್ವಯಂ ಸೇವಕರು ತಮ್ಮ ಮನೆದೇವರ ಪೂಜಿಸುವ ಬದಲು ನಿತ್ಯವೂ ಭಾರತ ಮಾತೆಯನ್ನು ಅರ್ಚಿಸುತ್ತಾ  ತಾನು ಮತ್ತು ದೇಶ ಎಂಬ ಎರಡು ಆಯ್ಕೆ ಬಂದಾಗ  ದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಾ  ಸ್ವಾರ್ಥ ತ್ಯಾಗ ಮಾಡಿ ದೇಶಕ್ಕಾಗಿ ತನ್ನನ್ನೇ ಬಲಿದಾನ ಮಾಡಿರುವ ಹಲವು ಸ್ವಯಂ ಸೇವಕರ ಉಧಾಹರಣೆಗಳಿವೆ, ಎಂದರು.
ಸಂಘವು ಕ್ರೈಸ್ತ ಅಥವ ಮುಸ್ಲಿಮ್ ವಿರೋಧಿಯಲ್ಲವೆಂದೂ ಆದರೆ ಭಾರತವನ್ನು ವಿರೋಧಿಸುವವರನ್ನು ವಿರೋಧಿಸುತ್ತದೆಂದು ತಿಳಿಸಿದರು. ಅಲ್ಲದೆ ಸಂಘವು ಪ್ರತಿಕ್ರಿಯಾತ್ಮಕವಾಗಿ ಬೆಳೆಯದೆ  ಸಕಾರಾತ್ಮವಾಗಿ ಬೆಳೆಯುತ್ತಾ  ಪ್ರತಿದಿನ ಸುಮಾರು  ೧೦ ಲಕ್ಷ ಜನರು ನಿತ್ಯವೂ ಸಂಘದ ಶಾಖೆಗೆ ಬಂದು ಒಳ್ಳೆಯ ಸಂಸ್ಕಾರವನ್ನು ಪಡೆಯುತ್ತಿದ್ದಾರೆಂದರು. ವಿವೇಕಾನಂದರ ಇಚ್ಚೆ ನೆರವೇರಬೇಕಾದರೆ  ಹೆಚ್ಚಿನ ಸಂಖೆಯಲ್ಲಿ ಹಿತೈಷಿ ಬಂಧುಗಳು ಸಂಘ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು ತಾಯಿ ಭಾರತಿಯು ಮತ್ತೊಮ್ಮೆ ಜಗದ್ಗುರುವಾಗಲು ತಮ್ಮ ಯೋಗದಾನ ನೀಡ   ಬೇಕೆಂದು ಕರೆ ನೀಡಿದರು.

ಪ್ರತಿ ಮನೆಯಲ್ಲಿ ಒಬ್ಬ ದೇಶಾಭಿಮಾನಿ ಹುಟ್ಟಬೇಕು- ಪೂಜ್ಯ ಸೋಮಶೆಖರ ಸ್ವಾಮೀಜಿ ಕರೆ
ನಮಗೆ ಆಶ್ರಯ ನೀಡಿ ಸಲಹಿರುವ  ಭಾರತಮಾತೆಗೆ ನಾವೇನು ಮಾಡಿದ್ದೇವೆ? ನಾವು ಸ್ವಾರ್ಥಿಗಳಾದರೆ ದೆಶವು ದುರ್ಬಲವಾಗುತ್ತದೆ, ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ದೇಶಾಭಿಮಾನಿ ಹುಟ್ಟಬೆಕೆಂದು, ಹಳೇಬೀಡು ಪುಷ್ಫಗಿರಿ ಮಠದ  ಪೂಜ್ಯ ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಕರೆ ನೀಡಿದರು. ಪೂಜ್ಯರು ಹಾಸನದಲ್ಲಿ ಖSS ಸಂಯೋಜಿಸಿದ್ದ “ಯುವ ಶಕ್ತಿ ಸಂಗಮದಲ್ಲಿ ಸಾನ್ನುಧ್ಯ ವಹಿಸಿ ಮಾತನಾಡುತ್ತಿದ್ದರು.

ಯುವ ಶಕ್ತಿ ಸಂಗಮದ ಸಾರ್ವಜನಿಕ ಸಮಾರಂಭದಲ್ಲಿ ಸುಮಾರು ಮೂರು ಸಹಸ್ರಕ್ಕೂ ಹೆಚ್ಚು ಗನವೇಷಧಾರಿ ಸ್ವಯಂ ಸೇವಕರು  ಘೋಷ್ ವಾದ್ಯದೊಡನೆ  ಶಾರೀರಿಕ ಪ್ರದರ್ಶನ ನಡೆಸಿದರು. ಸಭೆಯಲ್ಲಿ    ಸಹಸ್ರಾರು ಮಹಿಳೆಯರೂ ಮತ್ತು ಮಹನೀಯರೂ ಸೇರಿದ್ದರು.    ಸಮಾರಂಭಕ್ಕೆ ಮುಂಚೆ  ನಗರದ ಪ್ರಮುಖ ರಸ್ತೆಗಳಲ್ಲಿ ಘೋಷ್ ವಾದ್ಯದೊಡನೆ  ಗಣವೇಶಧಾರೀ ಸ್ವಯಂ ಸೇವಕರ ಆಕರ್ಶಕ ಪಥಸಂಚಲನವು ನಡೆದು ಮೂರು ದಿಕ್ಕುಗಳಿಂದ ಸಾಗಿಬಂದ ಮೂರು ಬೇರೆ ಬೇರೆ ಪಥಸಂಚಲನವು ನರಸಿಂಹ ರಾಜ ವೃತ್ತದಲ್ಲಿ ಮಧ್ಯಾಹ್ನ ೩.೩೦ ಕ್ಕೆ ಸಂಗಮ ಗೊಂಡ ದೃಶ್ಯವು ಜನರಲ್ಲಿ ರೋಮಾಂಚನವನ್ನುಂಟು ಮಾಡಿತು.