ಶಿವಮೊಗ್ಗ Sept 29: ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆ ಅಂಗವಾಗಿ ಸೆ.೨೯ರ ಭಾನುವಾರ ಬಿ.ಹೆಚ್. ರಸ್ತೆಯ ಅಶೋಕ ಸಾಮ್ರಾಟ್‌ನಲ್ಲಿ ಪ್ರಬುದ್ಧರ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಕುವೆಂಪು ವಿವಿಯ ದೂರಶಿಕ್ಷಣ ನಿರ್ದೇಶಕ ಡಾ. ವೆಂಕmಶ್ವರಲು ಉದ್ಘಾಟಿಸಿದರು. ಶಿವಮೊಗ್ಗದ ಖ್ಯಾತ ಉದ್ಯಮಿ ಹಾಗೂ ಸ್ವಾಮಿ ವಿವೇಕಾನಂದ ೧೫೦ನೇ ಜನ್ಮ ವರ್ಷಾಚರಣೆ ಸಮಿತಿಯ ಪ್ರಾಂತೀಯ ಸದಸ್ಯ ಹೆಚ್.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ರಾ.ಸ್ವ. ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪ ವೇದಿಕೆಯಲ್ಲಿದ್ದರು.
ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಧಾರವಾಡ ಆಕಾಶವಾಣಿಯ ಕಾರ್ಯಕ್ರಮಾಧಿಕಾರಿ ದಿವಾಕರ ಹೆಗಡೆ, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯ ಹಾಗೂ ಉಪನ್ಯಾಸಕ ಡಾ. ಜಯಕೃಷ್ಣ ನಾಯಕ್ ಅವರುಗಳು ವಿಚಾರ ಮಂಡನೆ ಮಾಡಿದರು. ನ. ಕೃಷ್ಣಪ್ಪನವರು ಸಮಾರೋಪ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಈ ವಿಚಾರಗೋಷ್ಠಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು.
No comments:
Post a Comment