ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday, 12 February 2013

ವಿವೇಕಾನಂದರ ವಿಚಾರಗಳನ್ನು ಹೃದಯದಲ್ಲಿ ತುಂಬಿಕೊಳ್ಳೋಣ




ಯುವಕರು ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಹೃದಯದಲ್ಲಿ ತುಂಬಿಕೊಂಡು ಸಮಾಜಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಮಾತ್ರ ಯುವ ದಿವಸವನ್ನು ಸ್ವಾಮೀಜಿಯವರ ಹೆಸರಲ್ಲಿ ಆಚರಿಸಿದ್ದು ಸಾರ್ಥಕವಾದೀತು, ಎಂದು  ಸ್ವಾಮಿ ವಿವೇಕಾನಂದ150ನೇ ಜನ್ಮ ವರ್ಷಾಚರಣೆಯ  ಹಾಸನ ಜಿಲ್ಲಾ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಕರೆ ನೀಡಿದರು.ಅವರು ಹಾಸನದ  ಶ್ರೀಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಹಾಸನ ತಾಲ್ಲೂಕು  ಚನ್ನಂಗಿಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.    ಚಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ    ಮತ್ತು ಅದರ ಪರಿಣಾಮ ವಾಗಿ ಅಮೆರಿಕೆಯ ಜನರಲ್ಲಿ ಉಂಟಾದ ವೈಚಾರಿಕ ಪರಿವರ್ತನೆಯ ಬಗ್ಗೆ ಶ್ರೀಯುತರು   ಎಳೆ ಎಳೆಯಾಗಿ ವಿವರಿಸದರು. ವಿದ್ಯಾರ್ಥಿಗಳು ಶಿಬಿರದಲ್ಲಿ ಇರುವ ನಾಲ್ಕು ದಿನಗಳಲ್ಲಿ ಮುಂದೆಯೂ ಗ್ರಾಮಸ್ಥರ ನೆನಪಿನಲ್ಲಿರುವಂತಹ ಸಾಮಾಜಿಕ ಕಾರ್ಯವನ್ನು ಮಾಡಬೇಕೆಂದು ಕರೆ ಕೊಟ್ಟರು. ಶ್ರೀಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಗುರುರಾಜ ಜಹಾಗಿರ್ದಾರ್ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದರು.ಶಿಬಿರ ಸಂಯೋಜಕರಾದ ಪ್ರೊ. ಪಾಂಡುರಂಗ ಮತ್ತು ಊರಿನ ಪ್ರಮುಖರು ವೇದಿಕೆಯಲ್ಲಿದ್ದರು.

No comments:

Post a Comment