ಮೇಲಿನ ವರದಿ ಓದಿದ ಆರ್ಯಸಮಾಜ ವನ್ನು ಒಪ್ಪುವ ಶ್ರೀ ವಾಸುದೇವರಾವ್ ಮತ್ತು ನನ್ನ ನಡುವೆ ಫೇಸ್ ಬುಕ್ ತಾಣದಲ್ಲಿ ಚರ್ಚೆ ನಡೆದು ಅಲ್ಲಿ ಪ್ರಕಟವಾದ ಅಭಿಪ್ರಾಯಗಳನ್ನು ಇಲ್ಲಿ ಕೂಡ ಪ್ರಕಟಿಸಲಾಗಿದೆ.
Vasudevarao Rao:
Swami Satya Prakash Saraswati, an eminent Vedic scholar (who worked as HOD Chemistry Dept. of Allahabad University) has remarked as under:
"Dayananda all through his life stood for truth and blunt truth. He did not believe in appeasements and compromises in matters of truth. On such issues, major or minor, whatever you say, the pact between the two organizations, the Arya Samaj and the Theosophical Society, failed. Foreign collaboration was no attraction to Dayananda at the cost of basic truth. I do not think, how Vivekananda would have reacted on such issues. Vivekananda had a built of plastic material, which could be easily moulded; but Dayananda was a hard granite rock.
In some matters, Vivekananda appears to be traditional Hindu. He also very much wanted to establish Veda Pathashalas or the Vedic Colleges to eradicate superstitions from the Hindu Mind, but his concept of the Vedas essentially differed from the concept of Dayananda and ancient Rishis. Dayananda and Vivekananda both wanted to integrate the theological concepts and theological creeds. Dayananda invited in India the leaders of several sections to work together for the benefit of mankind : Dayananda loved Muslims, Christians, Buddhists, Jains and Hindus alike. He wanted them to mete their differences round a table and chalk out a G.C.M. (as I have already pointed out). The objective of Vivekananda was also the same, but instead of evolving G.C.M. or H.C.F., he stood for L.C.M. – the Lowest Common Factor; this, in other words, means, that you accept my superstitions, and I accept your superstitions : you tolerate my frauds and credulities, and I shall not speak against yours. And here Dayananda differs from Vivekananda. And therefore, for a section of people, Vivekananda is more convenient than Dayananda. And we know, Truth is, however, a hard task master; it does not submit to compromises and appeasements. And consequently, all laurels to them who have courage to live and die for Truth.
ಹರಿಹರಪುರ ಶ್ರೀಧರ್ :- ವಾಸುದೇವರಾಯರೇ, ನಿಮ್ಮ ವಿಚಾರಕ್ಕೆ ನನ್ನದೂ ಸಮ್ಮತಿ ಇದೆ. ಇಂತಾ ಸಂದರ್ಭ ಎದುರಾದಾಗ ಸುಧಾಕರಶರ್ಮರೊಡನೆ ಜಗಳ ಮಾಡುವುದು ಮಾಮೂಲಾಗಿ ಬಿಟ್ಟಿದೆ. ಆರ್ಯ ಸಮಾಜದ ಅನುಯಾಯಿಗಳು ಸ್ವಲ್ಪ ವಿಶಾಲವಾಗಿ ವಾಸ್ತವ ಸಂಗತಿಗಳನ್ನೂ ಗಮನಿಸಬೇಕು. ವಾಸ್ತವ ಅಂಶವೇನೆಂದರೆ ವಿವೇಕಾನಂದರು ಜನರಿಗೆ ಗೊತ್ತಿರುವಷ್ಟು ದಯಾನಂದರು ಗೊತ್ತಿಲ್ಲ. ಕೆಲವು ಸಂಗತಿಗಳು ತಾಳೆಯಾಗದಿದ್ದರೂ ಹಲವು ಅಂಶಗಳಲ್ಲಿ ಇಬ್ಬರೂ ಮಾನ್ಯರೇ ಆಗಿದ್ದಾರೆ. ಸಮಾಜವಿರೋಧಿ ಶಕ್ತಿಗಳನ್ನು ವಿರೋಧಿಸಬೇಕೇ ಹೊರತೂ ನಾವು ಇಂತಹ ಮಹಾಪುರುಷರ ಬಗ್ಗೆ ತಾಳೆಮಾಡುತ್ತಾ ಕೂರುವ ಕಾಲವಲ್ಲಾ, ಇದು. ನಾನಂತೂ ಮೂಲತ: RSS. ಆದರೆ ಆರ್ಯ ಸಮಾಜದ ಬಹುಪಾಲು ವಿಷಯಗಳು ನನಗೆ ಒಪ್ಪಿಗೆ ಆಗುತ್ತವೆ ,ವೇದದ ಕಾರನದಿಂದ. ಆದರೆ ಇನ್ನು ಹಲವು ಸಂಗತಿಗಳಿಗೆ RSS ಗೆ ಸರಿಸಾಟಿ ಇಲ್ಲ. ಅದಕ್ಕೇ ಶರ್ಮರು ಹೇಳುತ್ತಿರುತ್ತಾರೆ " RSS Body with Vedik mind" ನಮ್ಮ ದೇಶಕ್ಕೆ ಬೇಕೆಂದು. ನಾನಂತೂ ಹಾಸನದಲ್ಲಿ ವೇದ ಭಾರತೀ ಸಂಸ್ಥೆಯ ಹೆಸರಲ್ಲಿ ಮಾಡುತ್ತಿರುವುದು ಅದೇ ಕೆಲಸ. ಅದರಲ್ಲಿ ಖುಷಿ ಇದೆ. ಒಂದಿಷ್ಟು ಸಾಧಿಸುವ ನಂಬಿಕೆ ಇದೆ.
Vasudevarao Rao:-
ವಿವೇಕಾನಂದರು ಪರಿಚಯವಿರುವಷ್ಟು ದಯಾನಂದರು ಗೊತ್ತಿಲ್ಲವೆಂಬ ಅಂಶ ನಿಜ. ವಿವೇಕಾನಂದರನ್ನು ಜನಪ್ರಿಯಗೊಳಿಸುವಲ್ಲಿ RSS ನ ಪಾತ್ರ ಬಲುದೊಡ್ಡದು. ಇದಕ್ಕೆ ಕಾರಣವೂ ಇದೆ. ಸಂಘದ ದ್ವಿತೀಯ ಸಂಘಚಾಲಕರಾಗಿದ್ದ ಗುರೂಜಿಯವರು ಪೂರ್ವಾಶ್ರಮದಲ್ಲಿ ರಾಮಕೃಷ್ಣ ಆಶ್ರಮದ ಸಂನ್ಯಾಸಿಯಾಗಿದ್ದರು. ಹೀಗಾಗಿ ಅವರಿಗೆ ವಿವೇಕಾನಂದರ ಬಗ್ಗೆ ಒಲವಿತ್ತು. ಸಂಘದ ಸ್ವಯಂಸೇವಕರು ಇದನ್ನೇ ಅನುಸರಿಸಿದರು. ತಪ್ಪೇನಿಲ್ಲ. ಆದರೆ ನಿಷ್ಠುರತೆ, ಸತ್ಯಕ್ಕೆ ನಿಷ್ಠರಾಗಿದ್ದ ದಯಾನಂದರಿಗೆ ಸಲ್ಲಬೇಕಾದ ಗೌರವ ಮಾನ್ಯತೆಗಳು ಸಂಘದ ವತಿಯಿಂದ ದೊರಕಲೇ ಇಲ್ಲ. ಎಲ್ಲರೊಂದಿಗೂ ರಾಜಿಮಾಡಿಕೊಳ್ಳುವ ಸಂಘದ ಸ್ವಯಂ ಸೇವಕರ ಮನೋಭಾವ ಮತ್ತು ಸತ್ಯದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದ ಮನೋಭಾವ ಇವರೆಡರ ನಡುವೆ ದಯಾನಂದರು ಜನಪ್ರಿಯರಾಗಲಿಲ್ಲ. ಅಷ್ಟೇ. ವಿವೇಕಾನಂದರು ಒಂದು ದಂದ್ವ ವೈಕ್ತಿತ್ವ. ಸಭೆಯನ್ನು ನೋಡಿ ಮಾತನಾಡುವ ಶೈಲಿ ಅವರಿಗೆ ಕರಗತವಾಗಿತ್ತು. ಸತ್ಕಕ್ಕೆ ವಿಷಯ ದೂರವಾದರೂ ಅವರು ಅದರಿಂದ ವಿಚಲಿತರಾಗಲಿಲ್ಲ. ಸಂಘ ಪ್ರತಿಪಾದಿಸುವ ಗೋಭಕ್ತಿ, ಹಿಂದಿ ನಿಷ್ಠೆ ಮತ್ತು ದೇಶ ಪ್ರೇಮ, ಸಸ್ಯಾಹಾರ, ಮುಂತಾದ ವಿಷಯಗಳಲ್ಲಿ ಸಂಘ ಪ್ರತಿಪಾದಿಸುವ ವಿಚಾರಕ್ಕೂ ವಿವೇಕಾನಂದರು ಪ್ರತಿಪಾದಿಸುವ ವಿಚಾರಕ್ಕೂ ತಾಳಮೇಳವಿಲ್ಲ. ಆದರೂ ವಿವೇಕಾನಂದರು ಸಂಘಕ್ಕೆ ಅದರ್ಶ. ಆದರೆ ಇಂತಹ ವಿಷಯಗಳಲ್ಲಿ ಸಂಘ ವಿಚಾರಕ್ಕೆ ಹತ್ತಿರವಿರುವ ದಯಾನಂದರು ಸಂಘದಿಂದ ದೂರ. ಇದೊಂದು ವಿಪರ್ಯಾಸವೇ ಸರಿ. ಈ ಬಗ್ಗೆ ನಾನು ಹೆಚ್ಚು ಹೇಳುವ ಅಗತ್ಯವಿಲ್ಲ. ಖಂಡಿತವಾದಿ ಲೋಕವಿರೋಧಿ. ದಯಾನಂದರು ಸತ್ಯ ನುರಿದರೆಂದೇ ಸಂಘಕ್ಕೆ ಪಥ್ಯವಾಗಲಿಲ್ಲ.
ಹರಿಹರಪುರ ಶ್ರೀಧರ್:-
ರಾಯರೇ, ವೇದದ ಬಗ್ಗೆ ಗೌರವ ಎಲ್ಲರಿಗೂ ಇದೆ. ಆದರೆ ಸಂಘ ಹುಟ್ಟುವುದಕ್ಕಿಂತ ಮುಂಚಿನಿಂದಲೂ ವೈದಿಕ ಚಿಂತನೆ ಕಡಿಮೆಯಾಗಿ ಕಥೆ ಪುರಾಣದ ಕಡೆ ಸಮಾಜವನ್ನು ತಿರುಗಿಸಿ,ಅಡಗೂಲಜ್ಜಿ ಕಥೆಗಳನ್ನು ಹೇಳಿಕೊಂಡುಬಂದು ಜನರನ್ನು ವಂಚಿಸಿಯಾಗಿತ್ತು. ಹಿಂದುಗಳಲ್ಲಿ ಒಗ್ಗಟ್ಟಿರಲಿಲ್ಲವಾದ ಕಾರಣ ಹಿಂದುಗಳಲ್ಲಿ ಜಾಗೃತಿ ಉಂಟುಮಾಡಲು ಡಾ|| ಹೆಡಗೇವಾರ್ 1925 ರಲ್ಲಿ RSS ಆರಂಭಿಸಿದ್ದು ನಿಮಗೆ ಗೊತ್ತಿದೆ.ಆಗಲೇ ಹೆಡಗೇ ವಾರರೂ ಆರ್ಯಸಮಾಜದ ಹಾದಿಯಲ್ಲಿ ಹೊರಟಿದ್ದರೆ ಇಂದು ಆರ್ಯಸಮಾಜವೂ ಇರುತ್ತಿರಲಿಲ್ಲ, ಹಿಂದು ಸಮಾಜವೂ ಇರುತ್ತಿರಲಿಲ್ಲ.ಕಾರಣ ಆ ಹೊತ್ತಿಗಾಗಲೇ ಅಷ್ಟೊಂದು ಆಕ್ರಮಣ ನಮ್ಮ ದೇಶದ ಮೇಲೆ ನಮ್ಮ ಧರ್ಮದ ಮೇಲೆ ನಡೆದಿರುವುದು ಇತಿಹಾಸ. ಆ ಸಂದರ್ಭದಲ್ಲಿ ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸಿ, ತನ್ಮೂಲಕ ದೇಶದ ತರುಣರಲ್ಲಿ ದೇಶಭಕ್ತಿಯನ್ನೂ ತುಂಬಿ ಅದ್ಭುತವಾದ ಸಂಘಟನೆಯಾಗಿ RSS ಬೆಳೆಯುವಾಗ ಅದು ಅನುಭವಿಸಿದ ನೋವು ಅಷ್ಟಿಷ್ಟಲ್ಲ, ಅಪಹಾಸ್ಯ, ತಿರಸ್ಕಾರ,ವಿರೋಧಗಳನ್ನು ಎದುರಿಸಿ ಜನಸಾಮಾನ್ಯರಲ್ಲಿ ತಲುಪುವಾಗ ರಾಜಕೀಯ ಎದುರಾಳಿಗಳಿಗೆ ನಡುಕ ಉಂಟಾಗಿ ಅವರ ವಿರೋಧ ಮತ್ತು ಅಹಿಂದುಗಳ ವಿರೋಧ, ಹಾಗೂ ವಿಚಾರವಾದದ ಹೆಸರಿನಲ್ಲಿ ವಿರೋಧ, ಎದುರಿಸುತ್ತಿರುವ ಏಕೈಕ ಸಂಘಟನೆ RSS ಆಗಿದೆ. ಈಗ ಹೇಳಿ, RSS ವೇದಕ್ಕೆ ಅನುಗುಣವಾಗಿ ನಡೆದಿದ್ದರೆ ದೇಶದಲ್ಲಿರುವ ಲಕ್ಷಾಂತರ ಮಠಮಂದಿರಗಳು/ದೇವಾಲಯಗಳು/ಪುಣ್ಯಕ್ಷೇತ್ರಗಳ ಭಕ್ತರ ವಿರೋಧವನ್ನೂ ಕಟ್ಟಿಕೊಳ್ಳಬೇಕಿತ್ತು. ಕಾರಣ ಗೊತ್ತೇ ಇದೆ, ವೇದವು ಮೂರ್ತಿ ಪೂಜೆಯನ್ನೇ ಒಪ್ಪುವುದಿಲ್ಲ. ಅದೇ ದೊಡ್ದ ಸಮಸ್ಯೆ ಇರುವುದು. ಭಗವಂತನು ನಿರಾಕಾರಿ ಎಂಬುದೇ ಸತ್ಯ. ಅದನ್ನು ಸಮಾಜದ ಕೆಳಮಟ್ಟಕ್ಕೆ ಮುಟ್ಟಿಸಲಾದೀತೇ? ಮತ್ತೊಂದು ಕಡೆ ಸಾವಿರ ವರ್ಷಗಳಿಂದ ಬೆಳೆದು ಹೆಮ್ಮರವಾಗಿರುವ ಪುರೋಹಿತಶಾಹಿ ವರ್ಗ! ನೋಡೀ, RSS ಸರಿಯಾದ ನಿಲುವನ್ನೇ ತೆಗೆದುಕೊಂಡಿದೆ. ಈಗೀಗ ನಮ್ಮಂತವರಿಗೆ ವೇದ ಬೇಕಾಗಿದೆ. ನಮ್ಮಂತವರ ಸಂಖ್ಯೆ ಹೆಚ್ಚಲು ಇನ್ನುಮುಂದೆ ಹೆಚ್ಚುಕಾಲ ಬೇಕಿಲ್ಲ. ಇಂದಿನ ಜನರಿಗೆ ವೇದದ ಅರಿವು ಮೂಡಿಸುವುದು ಹಿಂದಿಗಿಂತಲೂ ಸುಲಭ. ಈಗಾಗಲೇ RSS ವತಿಯಿಂದಲೂ ವೇದದ ಗುರುಕುಲಗಳು ನಡೆಯುತ್ತಿವೆ. ವೇದದ ಕೆಲಸಕ್ಕೇ ಹೆಚ್ಚಿನ ಆಧ್ಯತೆ ಸಿಗುವ ಕಾಲ ದೂರವಿಲ್ಲ. ನಿಜವಾಗಿ RSS ದೇಶ ಕಟ್ಟುವ ಕೆಲಸ ಮಾಡಿಕೊಂಡು ಹೋಗುತ್ತಿದೆ. ಅದರ ಕೆಲಸ ಅದು ನೂರು ಪ್ರತಿಶತ ಪ್ರಯತ್ನ ಹಾಕಿ ಮಾಡುತ್ತಿದೆ. ವೇದಕ್ಕೆ ಅಡಚಣೆಯಾಗಿರುವವರು ಮೌಢ್ಯವನ್ನು ಹೆಚ್ಚಿಸುತ್ತಿರುವ ವೇದವನ್ನು ಅರೆದುಕುಡಿದಿರುವ ಪಂಡಿತರುಗಳೇ ಎಂಬುದು ವಿಪರ್ಯಾಸ!
No comments:
Post a Comment