ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday 29 January 2013

ನನ್ನೊಳಗಿನ ಮಾತು





ವಿವೇಕಾನಂದರ ಬಗ್ಗೆ ಭಾಷಣ ಮಾಡಿದಾಗ ನಾಲ್ಕು ಹುಡುಗರು ಚಪ್ಪಾಳೆ ತಟ್ಟಿ   ಬಿಟ್ಟರೆ………..ನೀ ಬರೆದ ಎರಡು ಲೇಖನಗಳು  ಪತ್ರಿಕೆಯಲ್ಲಿ ಪ್ರಕಟವಾಗಿ   ಬಿಟ್ಟರೆ ನೀನು ವಿವೇಕಾನಂದರೇ ಆಗಿ ಬಿಟ್ಟೆ! ಅಂದುಕೊಂಡೆಯಾ! ಮಂಕೇ, ನಿನ್ನ ಮೀರಿಸಿ ಮಾತನಾಡುವ- ಬರೆಯುವ ಸಾವಿರ ಜನ ಸಿಕ್ತಾರೆ! ಆದರೆ ಅಂದು  ಭೋರ್ಗರೆಯುವ ಸಮುದ್ರಕ್ಕೆ ಹಾರಿ ಎರಡು ಫರ್ಲಾಂಗ್ ಈಜಿಕೊಂಡು ಆ ಬಂಡೆ ಹತ್ತಿ ಕುಳಿತರಲ್ಲಾ ಅಂತಾ ಒಂದು ಸಾಹಸ ನಿನಗೆ ಮಾಡುಕ್ಕಾಗುತ್ತಾ? ಅಂದು ಅಮೆರಿಕೆಯ ಜನರಿಗೆ ವಿವೇಕಾನಂದರ ಸರಿಯಾದ ಪರಿಚಯವಾಗುವ ಮುಂಚೆ ಬಾಯಾರಿಕೆಗೆ ನೀರು ಕೇಳಿದಾಗ ಇವರ ವೇಷವನ್ನು ಕಂಡು” You begger get out”  ಅಂದಾಗ ಅವರ ಸ್ವಾಭಿಮಾನಕ್ಕೆ ಧಕ್ಕೆ ಯಾಯ್ತೆಂದು ಬೇಸರಿಸದೆ ಸುಧಾರಿಸಿಕೊಂಡರಲ್ಲಾ! ಆಪುಣ್ಯಾತ್ಮ! ಅಂತಾ ಒಂದು ಪ್ರಸಂಗ ನೀನು ಎದುರಿಸಿದ್ದೀಯಾ?
ಸಮಾಜ ನಿನ್ನನ್ನು ಸುಮ್ಮನೆ ಗುರುತಿಸಿ ತಬ್ಬಿ ಕೊಂಡು ಬಿಡುವುದಿಲ್ಲ. ಸಮಾಜಕ್ಕೆ ನಿನ್ನ ಯೋಗದಾನವೇನು? ಅಂತಾ ನಿನ್ನ ಆತ್ಮ ನಿರೀಕ್ಷಣೆ ಮಾಡಿಕೋ, ಬೇರೆಯವರ ಮುಂದೆ ಭಾಷಣ ಬಿಗಿಯುವ ಮುಂಚೆ ವಿವೇಕಾನಂದರ ಒಂದು ಅಂಶವನ್ನು ನಿನ್ನ ಜೀವನದಲ್ಲಿ ರೂಢಿಸಿಕೊಂಡಿದ್ದೀಯಾ? ಯೋಚನೆ ಮಾಡು. ನಿನ್ನ ಬಾಯಲ್ಲಿ ಸಾವಿರ  ಮಹಾನುಭಾವರುಗಳ ನುಡಿಗಳೇ ಉದುರಿಬೀಳಬಹುದು, ಆದರೆ ಅವರ ಯಾವ ಗುಣವನ್ನು ನೀನು ನಿನ್ನಲ್ಲಿ ಅಳವಡಿಸಿಕೊಂಡಿದ್ದೀಯಾ?
ಹೌದು, ಒಮ್ಮೆ ಆತ್ಮ ನಿರೀಕ್ಷಣೆ ಮಾಡಿಕೋ. ನಿಜವಾಗಿ ನಿನಗೆ  ನಮ್ಮ ದೇಶದ ಸಮಸ್ಯೆಗಳ     ಬಗ್ಗೆ ಕಾಳಜಿ ಇದೆಯೇ? ಹಾಗಾದರೆ ಸಮಾಜಕ್ಕೆ ನಿನ್ನ ಯೋಗದಾನವೇನು?
ನನ್ನೊಳಗೆ ಬಂದ ಚಿಂತನೆಗಳು ನನ್ನನ್ನು ಬೆಚ್ಚಿಬೀಳುವಂತೆ ಮಾಡಿದ್ದವು! ಆದರೆ ಬೆಚ್ಚಿ ಬೀಳ   ಬೇಕಾಗಿಲ್ಲ,ಎಂಬ ಒಳ ಅರಿವು ನನ್ನನ್ನು ಎಚ್ಚರಿಸಿತ್ತು. ನೋಡು, ನಿನ್ನ ಅಂತಸ್ಸಾಕ್ಷಿಗೊಪ್ಪುವಂತೆ ನೀನು ಏನಾದರೂ ಸಚ್ಚಿಂತನೆ ಮಾಡಿ ನಿನ್ನ ಜೀವನವನ್ನು ರೂಪಿಸಿಕೊಂಡಿದ್ದೀಯಾ? ಅದರಂತೆ ಸಾಗು, ಯಾರೂ ವಿವೇಕಾನಂದರಾಗಲು ಸಾಧ್ಯವಿಲ್ಲ. ಅದು ಪುಕ್ಕಟೆ ಪುನಗಲ್ಲ. ಅಂದರೆ ನಿರಾಶರಾಗಬೇಕಿಲ್ಲ.  ಯಾರಂತೆ ಯಾರೂ ಪೂರ್ಣವಾಗಿ ಆಗಲು ಸಾಧ್ಯವಿಲ್ಲ. ಅವರವರ ವ್ಯಕ್ತಿತ್ವ ಅವರವರಿಗೆ ದೊಡ್ದದು. ನಿನ್ನಲ್ಲಿರುವ ಯಾವುದೋ ಒಂದು ಗುಣ ಬೇರೆಯವರಲ್ಲಿ ಇಲ್ಲದಿರಬಹುದು. ಯಾವುದೋ ಒಂದು ವಿಚಾರದಲ್ಲಿ ನಿನ್ನಂತೆ ಅವರಾಗದಿರಬಹುದು. ಆದರೆ ನೀನೂ ಕೂಡ ಅವರಂತಾಗಲು ಸಾಧ್ಯವಿಲ್ಲ.
ಹೌದಲ್ವಾ? ನಾವು ವಿವೇಕಾನಂದರಂತಾಗಬೇಕೆಂಬುದು ಸರಿಯಾಗೇ ಇದೆ. ಆದರೆ ವಿವೇಕಾನಂದರೇ ನೀನಾಗಲಿಲ್ಲ ಎಂಬ ಚಿಂತೆ ಬೇಡ. ಶಿವನನ್ನು ಪೂಜಿಸುತ್ತಾ ಶಿವನೇ ಆಗಬೇಕೆಂಬುದೇ ಸರಿ. ಇದು ಆದರ್ಶ. ಆದರೆ ಆ ದಿಕ್ಕಿನಲ್ಲಿ ಹೊರಟಿರುವೆಯಾ? ಇಂದಲ್ಲಾ ನಾಳೆ ನಾನು ವಿವೇಕಾನಂದರೇ ಆಗುತ್ತೀನೆಂಬ ವಿಶ್ವಾಸ ನಿನಗಿರಲಿ. ಆದರೆ ಅಗಲಿಲ್ಲವಲ್ಲಾ! ಎಂಬ ಚಿಂತೆ ಬೇಡ. ಹಲವರು ಎಡವುವುದು ಇಲ್ಲೇ .ನಾನು ಅವರಂತಾಗಲಿಲ್ಲಾ! ಎಂದು ಕೊರಗುವುದು! ಕೊರಗಿದರೆ ಕೊರಗಬಹುದು ಅಷ್ಟೆ. ನಿನ್ನ ಹೊಟ್ಟೆ ತುಂಬಲು ನೀನೇ ತಿನ್ನಬೇಕು.

ಎಚ್ಚರ:-
ಒಂದು ಎಚ್ಚರ ವಹಿಸುವುದು ಅತ್ಯಗತ್ಯ. ನೀನು ಸಮಾಜಕ್ಕೆ ಮಾಡಬೇಕಾಗಿರುವುದು ಇನ್ನೂ ಸಾಕಷ್ಟಿದೆ, ನಾನೇನೂ ಅಲ್ಲ, ಎಂದು  ನಿನ್ನೊಳಗೆ ಚಿಂತನ-ಮಂಥನ ಆರಂಭವಾಗಿದ್ದರೆ ಅದು ಒಳ್ಳೆಯದೇ,ನಿನ್ನ ಅಂತರಾಳದ ಕರೆಗೆ ನೀನು ಓಗೊಡು, ಹೆಜ್ಜೆ ಮುಂದುವರೆಸು. ಆದರೆ ಯಾರೋ  ನಿನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ’ ಕೇವಲ ಭಾಷಣ   ಮಾಡುವುದಲ್ಲಾ, ವಿವೇಕಾನಂದರಂತೆ  ಬದುಕಬೇಕು, ಎಂದು ಉಪದೇಶಮಾಡಿದರೆ, ಇಲ್ಲಿ ನಿನ್ನ ವಿವೇಕ ಜಾಗೃತವಾಗಬೇಕು. ನಿನ್ನ ಬಗ್ಗೆ ನೀನು  ಎಚ್ಚರವಾಗಿರುವುದಷ್ಟೇ ಅಲ್ಲ, ನಿನಗೆ ಅವರ ಬಗ್ಗೆಯೂ ವಿಚಾರ ಗೊತ್ತಿರಬೇಕು. ನಿನಗೆ ಉಪದೇಶಮಾಡಿದವರಿಗೆ ಅರ್ಹತೆ ಇದೆಯೇ? ಸಮಾಜಕ್ಕೆ ಅವನ ಯೋಗದಾನವೇನು? ಅವನು ಪ್ರಾಮಾಣಿಕನೇ? ನಿಸ್ವಾರ್ಥನೇ? ಎಲ್ಲವನ್ನೂ ತಿಳಿದು ಅವನ ಮಾತನ್ನು ಸ್ವೀಕರಿಸಬೇಕೆನಿಸಿದರೆ,ಸ್ವೀಕರಿಸು ,ಹಾಗಿಲ್ಲದೆ ಅವನೇ ಒಬ್ಬ ದೊಡ್ಡ ಬ್ರಷ್ಟ,ಅಪ್ರಾಮಾಣಿಕ,ಎಂಬುದು ನಿನಗೆ ಖಾತ್ರಿಯಾಗಿದ್ದರೆ ಅವನು ಎಷ್ಟೇ ಪಂಡಿತನಿರಲಿ ಅವನನ್ನು ಉದಾಸೀನ ಮಾಡು. ಅವನ ಉದ್ಧೇಶವಾದರೂ ನಿನಗೆ ಅಪಮಾನ ಮಾಡಬೇಕೆಂಬುದೇ ಆಗಿದ್ದು ಖಾತ್ರಿಯಾಗಿದ್ದರೆ ನಿನ್ನ ಪ್ರಾಮಾಣಿಕತೆಯ ಗುರಾಣಿಯನ್ನು ಅವನಮೆಲೆ ಬಲವಾಗಿಯೇ ಪ್ರಯೋಗಿಸು.ಅವನು ಬಂಡ ನೆಂದಾದರೆ “ಅದೊಂದು ಕೊಚ್ಚೆ” ಎಂದು ತಿಳಿದರೆ ಖಂಡಿತವಾಗಿಯೂ ಅದರ ಮೇಲೆ ಕಲ್ಲೆಸೆಯಬೇಡ. ಕೊಚ್ಚೆ ನಿನ್ನ ಮುಖಕ್ಕೇ ಹಾರುತ್ತದೆ. ಉದಾಸೀನಮಾಡಿಬಿಡು.

No comments:

Post a Comment